ಅಶ್ವನಿ ಲೊಹಾನಿ 
ದೇಶ

ರೈಲ್ವೇ ಸೇವೆ ಅಧಿಕಾರಿ ಲೊಹಾನಿ ಏರ್ ಇಂಡಿಯಾಗೆ ಸಿಎಂಡಿ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 1980ನೇ...

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 1980ನೇ  ಬ್ಯಾಚ್ ನ ಭಾರತೀಯ ರೈಲ್ವೆ ಸೇವೆಯ ಹಿರಿಯ ಅಧಿಕಾರಿ ಅಶ್ವನಿ ಲೊಹಾನಿ  ಅವರನ್ನು
ನೇಮಿಸಲಾಗಿದೆ. ಸದ್ಯ ಅವರು ಮಧ್ಯಪ್ರದೇಶ ಪ್ರವಾಸೋದ್ಯಮಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಹಾಲಿ ಮುಖ್ಯಸ್ಥ ರೋಹಿತ್ ಸಂದನ್ರ ವಿಸ್ತರಿತ ಒಂದು ವರ್ಷದ  ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಕೇಂದ್ರ ಸಂಪುಟದ ನೇಮಕ ಸಮಿತಿ (ಎಸಿಸಿ) ಈ ಬಗ್ಗೆ ಸಮ್ಮತಿ ಸೂಚಿಸಿದೆ. ಅವರ ಅಧಿಕಾರದ ಅವಧಿ ಮೂರು ವರ್ಷ. ಅಂದಹಾಗೆ ಏರ್ ಇಂಡಿಯಾ ರು.30 ಸಾವಿರ ಕೋಟಿಯಷ್ಟು ನಷ್ಟದಲ್ಲಿದೆ.ಅಶ್ವನಿ ಲಹೋನಿ ಮೂಲತಃ  ಮೆಕಾನಿಕಲ್  ಎಂಜಿನಯರ್.  ಇಂಡಿಯನ್ ಸ್ಟೀಮ್  ರೈಲ್ವೆ ಸೊಸೈಟಿ ಸ್ಥಾಪಕ ಸದಸ್ಯರು. ಚಾರ್ಟರ್ಡ್ ಇನ್ ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ ಆ್ಯಂಡ್ ಟ್ರಾನ್ಸ್ ಪೋರ್ಟ್ನ  ಫಲೋಆಗಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ದ  ಪ್ರವಾಸೋದ್ಯಮ ಮಂಡಳಿಯ ಮಂಡಳಿಯ ಸದಸ್ಯರಾಗಿದ್ದಾರೆ ಲೊಹಾನಿ. ಹವ್ಯಾಸಿ ಲೇಖಕರಾಗಿರುವ  ಅವರು ವಿನ್ನಿಂಗ್ ಅಟ್ ವರ್ಕ್ ಎಗೆನೆಸ್ಟ್ ಆಲ್ ಆಡ್ಸ್'',`` ಸ್ಮೋಕಿಂಗ್ ಬ್ಯೂಟೀಸ್'' ಎಂಬ ಕೃತಿಗಳನ್ನು ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!