ದೇಶ

ತೆರಿಗೆ ವಂಚನೆ: ಸ್ಪೈಸ್ ಜೆಟ್, ಕಲಾನಿಧಿ ಮಾರನ್ಗೆ ನೂತನ ಸಮನ್ಸ್

Vishwanath S
ನವದೆಹಲಿ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೈಸ್ ಜೆಟ್ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಕಲಾನಿಧಿ ಮಾರನ್ ಅವರಿಗೆ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೂತನ ಸಮನ್ಸ್ ಜಾರಿ ಮಾಡಿದೆ. 
ಆದಾಯ ತೆರಿಗೆ ಇಲಾಖೆಗೆ ಮೂಲದಲ್ಲಿ ಕಡಿತ ಮಾಡಿದ ತೆರಿಗೆ(ಟಿಡಿಎಸ್) ಪಾವತಿ ಮಾಡಲು ವಿಫಲವಾದ ಆಪಾದನೆಯಲ್ಲಿ ದಾಖಲಿಸಲಾದ ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಪ್ರೀತಂ ಸಿಂಗ್ ಸೆಪ್ಟೆಂಬರ್ 21ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. 
ಆಗಸ್ಟ್ 21 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೋರ್ಟ್ ಗೆ ಒದಗಿಸುವಂತೆ ಸೂಚಿಸಲಾಗಿತ್ತು. ಇಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ನಟರಾಜನ್ ಅವರು ಯಾವುದೇ ದಾಖಲೆಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಮುಂದಿನ ಸೆಪ್ಟೆಂಬರ್ 21ಕ್ಕೆ ಹಾಜರಾಗುವಂತೆ ಸೂಚಿಸಿದೆ. 
SCROLL FOR NEXT