ಅಹಮದಾಬಾದ್: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಡ್ಡಾಯ ಮತದಾನ ಕಾನೂನು ಜಾರಿಗೆ ಗುಜರಾತ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ವಿಧಿಸಿದೆ.
ಕಡ್ಡಾಯ ಮತದಾನಕ್ಕೆ ಸಂಬಂಧಿಸಿದ ಗುಜರಾತ್ ಸ್ಥಳೀಯ ಸಂಸ್ಥೆ ತಿದ್ದುಪಡಿ ಕಾಯ್ದೆ 2009 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 'ಮತದಾನದ ಹಕ್ಕು' ಮತದಾನದಿಂದ ಹಿಂದೆ ಸರಿಯುವ ಹಕ್ಕನ್ನು ನೀಡಿದೆ. ಹೀಗಾಗಿ ಮತದಾನ ಮಾಡುವುದು ಕರ್ತವ್ಯವಾಗಬಾರದು ಎಂದು ಹೇಳಿದೆ.
ವಕೀಲ ಕೆ.ಆರ್.ಕೋಷ್ಠಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಜಯಂತ್ ಪಟೇಲ್ ಹಾಗೂ ನ್ಯಾಯಮೂರ್ತಿ ಎನ್.ವಿ.ವಿ ಅಂಜರಿಯಾ ಪೀಠ ಕಡ್ಡಯಾ ಮತದಾನ ಕಾಯ್ದೆ ಜಾರಿಗೆ ತಡೆ ನೀಡಿದೆ.
ಕಡ್ಡಾಯ ಮತದಾನಕ್ಕಾಗಿ 2009ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ಥಳೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂಗೀಕರಿಸಿತ್ತು. ಅದಕ್ಕೆ ಪ್ರಸ್ತುತ ರಾಜ್ಯಪಾಲ ಒ.ಪಿ.ಕೊಹ್ಲಿ ಅವರು ಸಹಿ ಹಾಕಿದ್ದರು.