ನವದೆಹಲಿ: ಜೆಟ್ ಏರ್ವೇಸ್ ವಿಮಾನದ ಪೈಲಟ್ ಒಬ್ಬ ಇನ್ನೇನು ವಿಮಾನದ ಇಂಧನ ಖಾಲಿಯಾಗಬೇಕು ಅಂತಹ ಸಂದರ್ಭದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿ 152 ಪ್ರಯಾಣಿಕರ ಜೀವವನ್ನು ಪಣಕ್ಕೀಟಿದ್ದ ಘಟನೆ ವರದಿಯಾಗಿದೆ.
ಆಗಸ್ಟ್ 8 ರಂದು ದೋಹದಿಂದ ಕೊಚ್ಚಿಗೆ ಬರುತ್ತಿದ್ದ ಜೆಟ್ ಏರ್ವೇಸ್‌ನ ವಿಮಾನದಲ್ಲಿ 152 ಪ್ರಯಾಣಿಕರಿದ್ದರು. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯನ್ನು ಗುರುತಿಸಲಾಗದ ಪೈಲಟ್ ಆಗಸದಲ್ಲೇ ವಿಮಾನವನ್ನು ಹಾರಾಡಿಸಿದ್ದಾನೆ.
ಇಂಧನ ಕನಿಷ್ಠ ಮಟ್ಟ 3500 ಕೆಜಿಗಿಂತ ಕಡಿಮೆಗಿಳಿದ್ದರಿಂದ ಎಚ್ಚೆತ್ತ ಪೈಲಟ್ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದಾನೆ. ಇನ್ನು ಕೆಲ ಕ್ಷಣಗಳು ವಿಮಾನ ಆಗಸದಲ್ಲೇ ಕಳೆದಿದ್ದರೆ ವಿಮಾನ ಆಗಸದಿಂದ ಕಲ್ಲು ಬಿದ್ದಂತೆ ನೆಲೆಕ್ಕೆ ಅಪ್ಪಳಿಸುವ ಸಂಭವ ಹೆಚ್ಚಿತ್ತು.
ಇಂಧನ ನೀತಿ, ಭಾರತೀಯ ವಾಣಿಜೋಧ್ಯಮ ಜೆಟ್ ನೀತಿ ಅನ್ವಯ ಪೈಲಟನ ಅಚಾತುರ್ಯ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ಪೈಲಟನ್ನು ಅಮಾನತ್ತು ಮಾಡಿದೆ.