ಮುಂಬೈ: ಪಾಕಿಸ್ತಾನದೊಂದಿಗಿನ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಸಭೆ ರದ್ದುಗೊಂಡಿರುವುದಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಅಸಮಾಧಾನ ವ್ಯಕ್ತಪಡಿಸಿದೆ.
ರಾಷ್ತ್ರೀಯ ಭದ್ರತಾ ಸಲಹೆಗಾರರ ನಡುವಿನ ಮಾತುಕತೆ ನಡೆದಿದ್ದರೆ ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲಿ ಎರಡೂ ದೇಶಗಳಿಗೆ ಸಹಯಾವಾಗುತ್ತಿತ್ತು ಎಂದು ಎನ್.ಸಿ.ಪಿ ನಾಯಕ ಮಜೀದ್ ಮೆಮನ್ ಅಭಿಪ್ರಾಯಪಟ್ಟಿದ್ದಾರೆ. ಎರಡೂ ದೇಶಗಳು ಎದುರಿಸುತ್ತಿರುವ ಭಯೋತ್ಪಾದನೆ ಸಮಸ್ಯೆ ಮಾತುಕತೆ ಮೂಲಕ ಮಾತ್ರ ಕೊನೆಯಾಗಲು ಸಾಧ್ಯ, ಆದರೆ ನಡೆಯಬೇಕಿದ್ದ ಮಾತುಕತೆಯನ್ನು ಹಲವು ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ.
ಭಾರತ-ಪಾಕಿಸ್ತಾನ ತಮ್ಮ ನಿಲುವನ್ನು ಸಡಿಲಿಸದ ಕಾರಣ ಮಾತುಕತೆಗೂ ಮುನ್ನ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಮಾಮನ್ ಹೇಳಿದ್ದಾರೆ. ಪಾಕಿಸ್ತಾನ ನಡೆಸುತ್ತಿರುವ ದುಷ್ಕೃತ್ಯಗಳನ್ನು ಜಗತ್ತಿನೆದುರು ಸಾಬೀತುಬಡಿಸಲು ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಮೆಮನ್ ತಿಳಿಸಿದ್ದಾರೆ.