ನವದೆಹಲಿ: ಏರ್ ಪೋರ್ಟ್ ಭದ್ರತಾ ತಪಾಸಣೆಯಿಂದ ತಮಗೆ ಸಿಗುತ್ತಿದ್ದ ವಿಶೇಷ ವಿನಾಯ್ತಿ ರದ್ದು ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸ್ವಾಗತಿಸಿದ್ದಾರೆ.
ನಾನೀಗ ವಿಐಪಿ ಅಲ್ಲ. ನನ್ನನ್ನು ಆ ರೀತಿ ಪರಿಗಣಿಸಲೂ ಬೇಡಿ ಎಂದು ಅವರು ಹೇಳಿದ್ದಾರೆ. ಕೊನೆಗೂ ಈ ವಿಶೇಷ ವಿನಾಯ್ತಿ ರದ್ದಾಗಿರುವುದಕ್ಕೆ ಖುಷಿಯಾಗಿದೆ. ಭದ್ರತಾತಪಾಸಣೆ ವಿನಾಯ್ತಿಯನ್ನು ನಾನು ಯಾವತ್ತೂ ಬಳಸಿಲ್ಲ.
ಇದು ರದ್ದಾಗಲಿ ಎಂದು ಕಾಯುತ್ತಿದ್ದೆ. ಈ ವಿಚಾರಕ್ಕೆ ಸಂಬಂಧಿಸಿ ನಾನು ಈ ಹಿಂದೆಯೂ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ ಎಂದು ವಾದ್ರಾ ಭಾನುವಾರ ಹೇಳಿದ್ದಾರೆ.