ದೇಶ

20 ಗಣಿ ಹರಾಜು ಶೀಘ್ರ

Shilpa D

ನವದೆಹಲಿ; ಗಣಿ ಹಗರಣದಿಂದ ಉದ್ಯಮವೇ ಜರ್ಜರಿತವಾಗಿ ಇರುವುದರಿಂದ ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಸುಮಾರು 20 ಪ್ರಮುಖ ಕಬ್ಬಿಣದ ಗಣಿಗಳನ್ನು ಹರಾಜಿಗಿಡುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಒಂದು ಕಾಲ ದಲ್ಲಿ ವಿಶ್ವದ 3ನೇ ಅತಿ ದೊಡ್ಡ ಗಣಿ ರಫ್ತಿನ ದೇಶವಾಗಿದ್ದ ಭಾರತ ಈಗ ಉಕ್ಕುತಯಾರಿಕೆಗೆ ಕಚ್ಚಾವಸ್ತುಗಳಿಗೆ ಆಮದು ಮಾಡಿಕೊಳ್ಳುವಂತಾಗಿದೆ.

ಹೀಗಾಗಿ ಸರ್ಕಾರ ಹರಾಜು ನಿರ್ಧಾರಕ್ಕೆ ಬಂದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಕನಿಷ್ಠ 300 ಟನ್ ಉತ್ಪಾದನೆಯ ಗುರಿಯಿದೆ. ಅಕ್ಟೋಬರ್, ನವೆಂಬರ್‍ನಲ್ಲಿ ಹರಾಜು ನಡೆಯಲಿದೆ. ಆರಂಭ ದಲ್ಲಿ 80 ಗಣಿಗಳನ್ನು ಹರಾಜಿಗಿಡಲಾಗಿದ್ದು ಚಿನ್ನದ ಗಣಿ, ಸುಣ್ಣದಕಲ್ಲು ಹಾಗೂ 20 ಪ್ರಮುಖ ಕಬ್ಬಿಣದ ಗಣಿಗಳು ಸೇರಿವೆ ಎಂದಿದ್ದಾರೆ.

SCROLL FOR NEXT