ಮುಂಬೈ: ಶೀನಾ ಬೋರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆಯಲ್ಲಿ ಇಂದ್ರಾಣಿಯ ಮೊದಲ ಪತಿ ಸಿದ್ಧಾರ್ಥ ದಾಸ್ ತಾಯಿ ಮಾಯಾರಾಣಿ ದಾಸ್ ಮಹತ್ವ ಹೇಳಿಕೆ ನೀಡಿದ್ದು, ಶೀನಾ ಮತ್ತು ಮಿಖಾಯಿಲ್ ಪೈಕಿ ಶೀನಾ ಮಾತ್ರ ತನ್ನ ಮಗ ದಾಸ್ ಮತ್ತು ಇಂದ್ರಾಣಿಯ ದಾಂಪತ್ಯದ ಕೂಸು ಎಂದಿದ್ದಾರೆ.
ಅಲ್ಲದೆ, ದಾಸ್ ಜೊತೆ ಇದ್ದಾಗಲೇ ಇಂದ್ರಾಣಿಗೆ ಶೀನಾ ಅಲ್ಲದೆ ಮತ್ತೊಬ್ಬ ಹೆಣ್ಣು ಮಗು ಜನಿಸಿತ್ತು. ಆ ಮಗುವಿನ ತಂದೆ ತಾನಲ್ಲ. ಅದು ಇಂದ್ರಾಣಿಯ ಅಕ್ರಮ ಸಂಬಂಧದ ಫಲ ಎಂಬ ಕಾರಣದಿಂದಲೇ ದಾಸ್ ಇಂದ್ರಾಣಿಯನ್ನು ತೊರೆದಿದ್ದ ಎಂದೂ ಮಾಯಾರಾಣಿ ಹೇಳಿರುವುದಾಗಿ ಬೆಂಗಳೂರು ಮಿರರ್ ವರದಿ ಮಾಡಿದೆ.
ಈ ನಡುವೆ, ಇಂದ್ರಾಣಿ ಹೈಸ್ಕೂಲ್‍ನಲ್ಲಿರುವಾಗಲೇ ತಂದೆಯ ಕಿರುಕುಳ ತಾಳಲಾರದೆ ಡ್ರೈವರ್ ಜತೆ ಮನೆ ತೊರೆದಿದ್ದರು ಎನ್ನಲಾಗಿದೆ. ಈ ನಡುವೆ, ಇಂದ್ರಾಣಿ ಹಾಗೂ ಸಂಜೀವ್ ಖನ್ನಾ ಪದೇ ಪದೆ ಹೇಳಿಕೆ ಬದಲಿಸುತ್ತಿರುವ ಹಿನ್ನಲೆಯಲ್ಲಿ ಆಕೆಯ ಸುಳ್ಳು ಪತ್ತೆ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.