ಪಾಟ್ನಾ: ಬಿಜೆಪಿ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ರಾಮ ಮಂದಿರದ ಬಗ್ಗೆ ಆರ್.ಎಸ್.ಎಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್, ರಾಮನ ಮೇಲೆ ಬಿಜೆಪಿಗೆ ಶ್ರದ್ಧೆ ಇಲ್ಲ, ರಾಜಕೀಯಕ್ಕಾಗಿ ಮಾತ್ರ ರಾಮನನ್ನು ಬಳಸಿಕೊಳ್ಳುತ್ತಿದೆ. ರಾಜಕೀಯ ಲಾಭಕ್ಕಾಗಿ ರಾಮಮಂದಿರ ವಿಷಯವನ್ನು ಬಿಜೆಪಿ ಜೀವಂತವಾಗಿರಿಸಿದೆ ಎಂದಿದ್ದಾರೆ.
ರಾಮಮಂದಿರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕವನ್ನು ಮರೆಯುತ್ತಾರೆ. ಎರಡು ಸಮುದಾಯಗಳ ನಡುವೆ ಮಾತುಕತೆ ಮೂಲಕ ಮಾತ್ರ ರಾಮಮಂದಿರ ವಿವಾದ ಬಗೆಹರಿಸಲು ಸಾಧ್ಯ ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.