ದೆಹಲಿ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂನ ಸಹಚರನೊಬ್ಬನನ್ನು ಭಾರತ ಗುಪ್ತಚರ ಇಲಾಖೆ ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ಬಂಧಿಸಿದೆ.
ನೇಪಾಳ ಪೊಲೀಸರ ಸಹಾಯದಿಂದ ದಾವೂದ್ ಸಹಚರ ಅಬೀದ್ ಪಟೇಲ್ ಎಂಬಾತನ್ನು ಬಂಧಿಸಲಾಗಿದೆ.
ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ನಾಯಕರನ್ನು ಗುಂಡಿಟ್ಟು ಹತ್ಯೆಗೈದ ಆರೋಪ ಅಬೀದ್ ಮೇಲಿದ್ದು, ಆತನಿಗಾಗಿ ಶೋಧ ನಡೆಯುತ್ತಿತ್ತು.
ಬಿಹಾರದಿಂದ ಆತ ತಲೆ ಮರೆಸಿಕೊಂಡು ಬಿಹಾರಕ್ಕೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದು, ನೇಪಾಳ ಪೊಲೀಸರ ಸಹಾಯದಿಂದ ಆತನನ್ನು ಸೆರೆ ಹಿಡಿಯಲಾಗಿದೆ.