ಪಾಟ್ನಾ: ಏಪ್ರಿಲ್ 1 ರಿಂದ ಬಿಹಾರದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟವನ್ನು ನಿಷೇಧಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಈಗ ತಮ್ಮ ಮಾತು ಬದಲಾಯಿಸಿದ್ದಾರೆ.
ದೇಶದಲ್ಲೇ ತಯಾರಿಸಲ್ಪಟ್ಟ ವಿದೇಶಿ ಮದ್ಯದ ತಯಾರಿಕಾ ವೆಚ್ಚ ಹೆಚ್ಚು.ಹೀಗಾಗಿ ಅದರ ಬೆಲೆಯೂ ಕೂಡ ಹೆಚ್ಚಿದ್ದು, ಈ ಮದ್ಯವನ್ನು ಕೊಂಡುಕೊಳ್ಳಲು ಜನ ಹಿಂದೇಟು ಹಾಕುತ್ತಾರೆ. ತೀರಾ ಬಡವರು ಈ ಸಾರಾಯಿ ಕುಡಿದು ತಮ್ಮ ಕುಟುಂಬ ಹಾಗೂ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ದೇಶಿಯ ಮದ್ಯವನ್ನು ಮಾತ್ರ ನಿಷೇಧಿಸುವುದಾಗಿ ನಿತೀಶ್ ಕುಮಾರ್ ಹೇಳಿದ್ದಾರೆ.
ಇನ್ನು ನಿತೀಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರ ಸಾರಾಯಿ ನಿಷೇಧ ಅಬಕಾರಿ ಸಚಿವ ಅಬ್ದುಲ್ ಜಲೀಲ್ ಮಸ್ತಾನ್, ಬಿಹಾರ ಸರ್ಕಾರ ಎಲ್ಲಾ ರೀತಿಯ ಆಲ್ಕೋಹಾಲ್ ನಿಷೇಧಿಸುವುದಾಗಿ ಹೇಳಿದ್ದಾರೆ. ಆಲ್ಕೋಹಾಲ್ ಎಂಬುದು ಸಾವು, ಸರ್ಕಾರ ಸಾವನ್ನು ಮಾರಾಟ ಮಾಡುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಾರಾಯಿ ಮಾರಾಟ ಮಾಡುವುದನ್ನು ನಿಷೇಧಿಸಲಿದೆ ಎಂದಿದ್ದಾರೆ.
ನವೆಂಬರ್ 26 ರಂದು ನಿತೀಶ್ ಕುಮಾರ್ ಏಪ್ರಿಲ್ 1 ರಿಂದ ಸರ್ಕಾರ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಿಸಲಿದೆ ಎಂದು ಹೇಳಿದ್ದರು.