ಚೆನ್ನೈ: ತಮಿಳುನಾಡಿನ ಜನರ ನೆರವಿಗೆ ಸಾಮಾಜಿಕ ತಾಣ ಫೇಸ್‍ಬುಕ್ ಕೂಡ ಧಾವಿಸಿದೆ. ಫೇಸ್‍ಬುಕ್ ಚೆನ್ನೈನಲ್ಲಿ ಸೇಫಿ್ಟ ಚೆಕ್ ಎಂಬ ಹೊಸ ಫೀಚರ್ ಅನ್ನು ಆ್ಯಕ್ಟಿವೇಟ್ ಮಾಡಿದೆ.
ಅದರಂತೆ, ಪ್ರವಾಹಪೀಡಿತ ಪ್ರದೇಶದಲ್ಲಿರುವ ಜನ, `ನಾನು ಸುರಕ್ಷಿತವಾಗಿದ್ದೇನೆ' ಎಂಬ ಬಟನ್ ಒತ್ತಿದೊಡನೆ, ಅದು ಅವರ ಎಲ್ಲ ಗೆಳೆಯರಿಗೂ ತಲುಪುತ್ತದೆ. ಈ ಮೂಲಕ ತಮ್ಮವರು ಸುರಕ್ಷಿತರಾಗಿದ್ದಾರಾ ಎಂಬುದನ್ನು ತಿಳಿಯಬಹುದಾಗಿದೆ.
ಇದೇ ವೇಳೆ, ಗೂಗಲ್ `ಚೆನ್ನೈ ಪ್ರವಾಹಕ್ಕೆ ಸಂಪನ್ಮೂಲಗಳು' ಎಂಬ ಲಿಂಕ್ ಅನ್ನು ತನ್ನ ಹೋಂಪೇಜ್‍ನಲ್ಲಿ ಪ್ರಕಟಿಸಿದೆ. ಇದು ನಗರದ ಪರಿಸ್ಥಿತಿ ಹಾಗೂ ಪರಿಹಾರ ಶಿಬಿರಗಳ ಮಾಹಿತಿ ಒದಗಿಸುತ್ತಿದೆ.