ನವದೆಹಲಿ: ಬಿಹಾರದಲ್ಲಿ ಎರಡು ರೈಲ್ವೆ ಎಂಜಿನ್ ಕಾರ್ಖಾನೆಗಳನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆ- 2015 ರಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸರ್ಕಾರ ರೈಲ್ವೆ ಎಂಜಿನ್ ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದು ಈ ಪೈಕಿ ಎರಡು ಕಾರ್ಖಾನೆಗಳು ಬಿಹಾರದಲ್ಲಿ ಪ್ರಾರಂಭವಾಗಲಿವೆ. ಉತ್ತಮ ಸಾಮರ್ಥ್ಯವನ್ನು ಹೊಂದಿದ್ದು, ಈಶಾನ್ಯ ರಾಜ್ಯಗಳ ಅಭಿವೃದ್ಧಿಯನ್ನು ಕಡೆಗಣಿಸಲು ಸಾಧ್ಯವಿಲ್ಲ, ಈಶಾನ್ಯ ಭಾರತದ ಅಭಿವೃದ್ಧಿಯತ್ತ ನಾವು ವಿಶೇಷವಾದ ಗಮನಹರಿಸಬೇಕಿದೆ ಎಂದಿದ್ದಾರೆ.
ಪ್ರತಿಯೊಂದು ರಾಜ್ಯವೂ ತನ್ನದೇ ಅದ ವೈಶಿಷ್ಠ್ಯ ಹೊಂದಿರುತ್ತದೆ, ಈಶಾನ್ಯ ರಾಜ್ಯಗಳಿಗೆ ಅನಿಲ ಗ್ರಿಡ್ ಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಇಂತಹ ಯೋಜನೆ ಪ್ರಾರಂಭವಾಗುತ್ತಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.