ನವದೆಹಲಿ: ಮುಂದಿನವರ್ಷದ ಏಪ್ರಿಲ್ ನಿಂದ 5ರಿಂದ 12 ವರ್ಷದೊಳಗಿನ ಮಕ್ಕಳಿಗೂ ಪುಲ್ ಟಿಕೆಟ್ ಶುಲ್ಕ ವಿಧಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಮಕ್ಕಳ ಟಿಕೆಟ್ ದರ ನೀತಿಯಲ್ಲಿ ಬದಲಾವಣೆ ತಂದಿರುವ ಇಲಾಖೆ ರಿಸರ್ವೇಷನ್ ಸಮಯದಲ್ಲಿ ಸೀಟು ಅಥವಾ ಬರ್ತ್ ಕಾಯ್ದಿರಿಸುವುದಾದರೆ ಈ ಪೂರ್ತಿ ಶುಲ್ಕ ನಿಯಮ ಅನ್ವಯವಾಗಲಿದೆ. ಆದರೆ ಕಾಯ್ದಿರಿಸದ ಟಿಕೆಟ್ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಎಂದಿನಂತೆ 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ಶುಲ್ಕವೇ ಮುಂದುವರೆಯುತ್ತದೆ ಎಂದು ಇಲಾಖೆ ತಿಳಿಸಿದೆ.