ಐಐಟಿ ದೆಹಲಿ 
ದೇಶ

ಮೇಕ್ ಇನ್ ಇಂಡಿಯಾಗಾಗಿ ಕೋಟಿ ವೇತನದ ಆಫರ್ ತಿರಸ್ಕರಿಸಿದ ಐಐಟಿ ವಿದ್ಯಾರ್ಥಿಗಳು

ವಾರ್ಷಿಕವಾಗಿ ಕೋಟಿ ರು.ವರಮಾನ ನೀಡುವ ಉದ್ಯೋಗದ ಆಫರ್‌ಗಳನ್ನು ಐಐಟಿಯ ನಾಲ್ವರು ಪದವೀಧರರು ತಿರಸ್ಕರಿಸಿದ್ದಾರೆ.

ನವದೆಹಲಿ: ವಾರ್ಷಿಕವಾಗಿ ಕೋಟಿ ರು. ವರಮಾನ  ನೀಡುವ ಉದ್ಯೋಗ ಆಫರ್‌ಗಳನ್ನೂ   ಐಐಟಿಯ ನಾಲ್ವರು ಪದವೀಧರರು ತಿರಸ್ಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು  ಸಾವಿರಗಳಲ್ಲಿ ಸಂಬಳ ನೀಡುವ ಸ್ಥಳೀಯ ಕಂಪನಿಗಳನ್ನೇ ಇವರು ಆರಿಸಿಕೊಂಡಿದ್ದಾರೆ.

ಗೂಗಲ್, ವೀಸಾ, ಒರಾಕಲ್ ಮತ್ತು ಮೈಕ್ರೋಸಾಫ್ಟ್‌ನಂಥ ದಿಗ್ಗಜ ಕಂಪನಿಗಳಿಂದ ಪ್ರತಿ ವರ್ಷವೂ ಉದ್ಯೋಗ ನೇಮಕಾತಿ ನಡೆಯಲಿದ್ದು, ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ವರಮಾನ ನೀಡುವ ಕೆಲಸಗಳಿಗೆ ಆಫರ್ ನೀಡುತ್ತವೆ.

ಉತ್ತಮ ವೇತನ ನೀಡುವಂಥ ಕಂಪನಿಗಳನ್ನೇ ಅಭ್ಯರ್ಥಿಗಳೂ ಆಯ್ದುಕೊಳ್ಳುವುದು ಸಾಮಾನ್ಯ. ಆದರೆ, ವಿದೇಶಿ ಕಂಪನಿಗಳು ನೀಡಿದ ಆಫರ್‌ನ ಕೇವಲ ಐದನೇ ಒಂದು ಭಾಗದಷ್ಟು ವೇತನ ನೀಡುವಂಥ ಸ್ಥಳೀಯ ಕಂಪನಿಗಳನ್ನು ಈ ನಾಲ್ವರು ಅಭ್ಯರ್ಥಿಗಳು ಆಯ್ದುಕೊಂಡಿದ್ದಾರೆ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ 'ಮೇಕ್ ಇನ್ ಇಂಡಿಯಾ'ದೊಂದಿಗೆ ಕೈ ಜೋಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದಲ್ಲಿಯೇ ಉತ್ಪಾದನೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವ ಮೂಲಕ ದೇಶದ ಪ್ರಗತಿ ಸಾಧಿಸುವುದು ಈ ಅಭಿಯಾನದ ಉದ್ದೇಶ. ಎಲ್ಲೆಡೆ 'ಮೇಕ್ ಇಂಡಿಯಾ'ಗೆ ಕೊಡುಗೆ ನೀಡಬೇಕೆನ್ನುವ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಾಗಿದೆ.

ಹೀಗಾಗಿ ಪ್ರತಿಭಾವಂತ ಅಭ್ಯರ್ಥಿಗಳನ್ನು ಆರಿಸಿಕೊಳ್ಳಲು ಭಾರತದ ಕಂಪನಿಗಳೂ ಆಕರ್ಷಕ ವೇತನ ಕೊಡಲು ಮುಂದಾಗಬೇಕು. ಜತೆಗೆ ಮೇಕ್ ಇನ್ ಇಂಡಿಯಾ ಯೋಜನೆಯ ನೀತಿಗಳೂ ಪ್ರತಿಭಾವಂತರನ್ನು ಪ್ರೋತ್ಸಾಹಿಸುವಂತೆ ಇರುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಯಾಗಿದೆ ಎಂದು ಈ ಪದವೀಧರರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ