ಗೋಮಾಂಸ ಸಾಗಣೆ ವದಂತಿ, ಹಲ್ಲೆ
ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದಿಂದ ಟ್ರಕ್ ಡ್ರೈವರ್ ಒಬ್ಬನನ್ನು ಗೋಸಂರಕ್ಷಣಾ...
ಗುರ್ಗಾಂವ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದಿಂದ ಟ್ರಕ್ ಡ್ರೈವರ್ ಒಬ್ಬನನ್ನು ಗೋಸಂರಕ್ಷಣಾ ಸಂಘಟನೆಯೊಂದು ಅಡ್ಡಗಟ್ಟಿ ಥಳಿಸಿದ ಘಟನೆ ಗುರುವಾರ ನಡೆದಿದೆ.
ಗಲಭೆಕೋರರು ಬಳಿಕ ಪೊಲೀಸರೊಂದಿಗೆ ಸಂಘರ್ಷಕ್ಕಿಳಿದರು.ಘಟನೆಯಲ್ಲಿ ಐವರು ಗ್ರಾಮಸ್ಥರು,ಒಬ್ಬ ಪೊಲೀಸ್ ಗಾಯಗೊಂಡಿದ್ದಾರೆ. ಮೇವಾಡದಿಂದ ಅಲಿಘಡಕ್ಕೆ ಸಾಗುತ್ತಿದ್ದ ಟ್ರಕ್ನಲ್ಲಿ ಗೋಮಾಂಸ ಇದೆ ಎಂಬ ವದಂತಿ ಹಬ್ಬಿ, ಗ್ರಾಮಸ್ಥರು ಅದನ್ನು ಹೆದ್ದಾರಿಯಲ್ಲಿ ತಡೆದು ಹಾನಿಗೊಳಿಸಿದರು. ಚಾಲಕನನ್ನು ಥಳಿಸಿದರು. ಬಳಿಕ ಹೆದ್ದಾರಿ ಅಡ್ಡಗಟ್ಟಿ ಪ್ರತಿಭಟಿಸಿದ ಗಲಭೆಕೋರರು, ಪೊಲೀಸರಿಗೆ ಚಾಲಕನನ್ನು ಒಪ್ಪಿಸಿದರು. ಬಳಿಕ ಪೊಲೀಸರಿಗೆ ಕಲ್ಲೆಸೆತಕ್ಕೆ ಮುಂದಾದಾಗ ಲಾಠಿ ಚಾರ್ಜ್ ಮಾಡಿ ಅವರನ್ನು ಚದುರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.