ರಾಹುಲ್ ಗಾಂಧಿ 
ದೇಶ

ಜನ ವಿರೋಧಿ ಜಿಎಸ್ ಟಿ ಮಸೂದೆ ಒಪ್ಪಲು ಸಾಧ್ಯವೇ ಇಲ್ಲ: ಕಾಂಗ್ರೆಸ್

ಜನ ವಿರೋಧಿ ಮಸೂದೆಯಾದ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಜಾರಿಗೆ ತರಲು ಬಿಡುವುದಿಲ್ಲ...

ನವದೆಹಲಿ: ಜನ ವಿರೋಧಿ ಮಸೂದೆಯಾದ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಪುನರುಚ್ಛರಿಸಿದೆ.

ಜನ ವಿರೋಧಿಯಾದ, ವ್ಯಾಪಾರಿಗಳ ವಿರುದ್ಧವಾಗಿರುವ ಮತ್ತು ಸಾಮಾನ್ಯ ಜನತೆಗೆ ವಿರುದ್ಧವಾಗಿರುವ ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ತಿಳಿಸಿದ್ದಾರೆ.

ಈ ಮಸೂದೆಯಲ್ಲಿ ಕೆಲವು ಅಡೆ ತಡೆಗಳಿವೆ. ಅವುಗಳನ್ನು ತೆಗೆದಿಲ್ಲ. ಮತ್ತು ಅಲ್ಲಿ ಸ್ವತಂತ್ರ ಪ್ರಾಧಿಕಾರವಿದೆ. ಅದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಜನ ವಿರೋಧಿಯಾದ ಜಿಎಸ್ಟಿ ಮಸೂದೆ ಬಿಜೆಪಿಗೆ ಮಾತ್ರ ಬೇಕಾಗಿದೆ ಎಂದರು.

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಅವರ ನೇತೃತ್ವದ ಸರ್ಕಾರಿ ಸಮಿತಿಯೊಂದು ಸರಕು ಮತ್ತು ಸೇವಾ ತೆರಿಗೆಗೆ ಗುಣಮಟ್ಟವೊಂದನ್ನು ಸೂಚಿಸಿದ್ದು, ಅದರ ದರ ಶೇಕಡಾ 17ರಿಂದ 18ರಷ್ಟಾಗಿದೆ. ಮುಂದಿನ ಆರ್ಥಿಕ ವರ್ಷ ಆರಂಭಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವುದರಿಂದ ಈ ಚಳಿಗಾಲ ಅಧಿವೇಶನದಲ್ಲಿಯೇ ಮಸೂದೆಯನ್ನು ಜಾರಿಗೆ ತರುವುದು ಉದ್ದೇಶವಾಗಿದೆ.

ಆರ್ಥಿಕ ಸಮಿತಿಯು ರಿಯಲ್ ಎಸ್ಟೇಟ್, ವಿದ್ಯುತ್, ಆಲ್ಕೋಹಾಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರಗಿಟ್ಟಿದ್ದು, ಅವುಗಳನ್ನು ಜಿಎಸ್ಟಿ ಮಸೂದೆಯೊಳಗೆ ತರಲು ಉದ್ದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ