ನವದೆಹಲಿ: ಸಿಪಿಐ ಹಿರಿಯ ನಾಯಕ ಎ.ಬಿ. ಬರ್ದಾನ್ ಅವರಿಗೆ ಪಾರ್ಶ್ವವಾಯು ಉಂಟಾಗಿದ್ದು, ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
92 ವರ್ಷದ ಎ.ಬಿ.ಬರ್ದಾನ್ ಅವರು ಸಿಪಿಐನ ಪ್ರಧಾನಕಾರ್ಯಾಲಯದಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ. ನಂತರ ಅವರನ್ನು ದೆಹಲಿಯ ಜಿ.ಬಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಯಿತುಎಂದು ಸಿಪಿಐ ನಾಯಕ ಅತುಲ್ ಕುಮಾರ್ ಅಂಜನ್ ಅವರು ಹೇಳಿದ್ದಾರೆ.
ಪ್ರಸ್ತುತ ಬರ್ದಾನ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯ ಹಿರಿಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆಂದು ಸಿಪಿಐನ ಮಾಜಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಬರ್ದಾನ್ ಅವರ ಪತ್ನಿ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ನಿಧನರಾಗಿದ್ದು. ದಂಪತಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ. ಅರ್ಧೆಂದು ಭೂಷಣ್ ಬರ್ದಾನ್ ಅವರು ಮಹಾರಾಷ್ಟ್ರ ವೃತ್ತಿ ಸಂಘಟನೆ ಚಳುವಳಿಯ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ನಂತರ ರಾಜಕೀಯದಿಂದ ದೂರಾದ ಅವರು, 1957ರಲ್ಲಿ ಮಹಾರಾಷ್ಟ್ರ ವಿಧಾಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆಲವು ಸಾಧಿಸಿದ್ದರು.
ನಂತರ ಸಿಪಿಐನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಇವರು, ಕಾಂಗ್ರೆಸ್ ನ ಅಖಿಲ ಭಾರತ ವ್ಯಾಪಾರ ಒಕ್ಕೂಟ ಅಧ್ಯಕ್ಷರಾದರು.ನಂತರ ಈ ಒಕ್ಕೂಟ ಭಾರತದ ಅತ್ಯಂತ ಹಳೆಯ ವ್ಯಾಪಾರಿ ಒಕ್ಕೂಡವಾಗಿ ಬೆಳೆಯಿತು. ನಂತರ ದೆಹಲಿ ರಾಜಕೀಯಕ್ಕೆ ಇಳಿದ ಅವರು, 1990ರಲ್ಲಿ ಸಿಪಿಐನ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.