ಸಾಂದರ್ಭಿಕ ಚಿತ್ರ 
ದೇಶ

ನಿಶ್ಚಿತಾರ್ಥ ನಂತರ ವರದಕ್ಷಿಣೆ ಬೇಡಿಕೆ: ಮದುವೆ ರದ್ದುಗೊಳಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ವಧು

ನಿಶ್ಚಿತಾರ್ಥದ ನಂತರ ವರನ ಕುಟುಂಬ ವರದಕ್ಷಿಣೆ ಕೇಳಿದ್ದಕ್ಕೆ ಅಸಮಾಧಾನಗೊಂಡ ವಧು, ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ,,,,

ಕೇರಳ: ನಿಶ್ಚಿತಾರ್ಥದ ನಂತರ ವರನ ಕುಟುಂಬ ವರದಕ್ಷಿಣೆ ಕೇಳಿದ್ದಕ್ಕೆ ಅಸಮಾಧಾನಗೊಂಡ ವಧು, ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ಘೋಷಿಸಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೇರಳದ ತ್ರಿಶ್ಶೂರ್ ನಿವಾಸಿ ರಮ್ಯಾ ರಾಮಚಂದ್ರನ್, ನಿಶ್ಚಿತಾರ್ಥದ ಬಳಿಕ ಗಂಡಿನ ಕಡೆಯವರು ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ, ಅದಕ್ಕೆ ತಾನು ಮದುವೆ ರದ್ದುಗೊಳಿಸಿರುವುದಾಗಿ ತನ್ನ ಫೇಸ್ ಬುಕ್ ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ನಿಶ್ಚಿತಾರ್ಥಕ್ಕೂ ಮುನ್ನ ಹಣ, ಚಿನ್ನ ಏನೂ ಬೇಡ ಎಂದು  ಹೇಳಿದ್ದ. ಆದರೆ ನಿಶ್ಚಿತಾರ್ಥವಾದ ಮೇಲೆ 50 ಸೌರನ್ ಚಿನ್ನ, 5 ಲಕ್ಷ ರೂಪಾಯಿ ನಗದು ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಯುವತಿ ತಿಳಿಸಿರುವುದಾಗಿ, ವರದಕ್ಷಿಣೆ ಸಂಪ್ರದಾಯಕ್ಕೆ ವಿರೋಧಿಯಾಗಿರುವ ತಾನು ಇದನ್ನೂ ವಿರೋಧಿಸಿ ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಯುದ್ಧ ವಿಮಾನ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

ಮಹಾರಾಷ್ಟ್ರ: ನಾಸಿಕ್ ಬಳಿ ಬಾವಿಗೆ ಬಿದ್ದ ಕಾರು, 9 ಮಂದಿ ಸಾವು-Video

ಗಡಿ ನುಗ್ಗಿ RSS ಶಿಬಿರ-ಮನೆಗಳ ಮೇಲೆ ನೇರ ದಾಳಿ: ಮತ್ತೆ ಬಾಲ ಬಿಚ್ಚಿದ ಪಾಕ್‌; ಭಾರತಕ್ಕೆ ಗೊಡ್ಡು ಬೆದರಿಕೆ

ಅತ್ತೆ ಮನೆ ಕಿರುಕುಳ: ಬೇಸತ್ತು ಬೆಂಕಿ ಹಚ್ಚಿಕೊಂಡು ಗರ್ಭಿಣಿ ಮಹಿಳೆ ಆತ್ಮಹತ್ಯೆ, ನಾಲ್ವರ ಬಂಧನ

SCROLL FOR NEXT