ದೇಶ

ರಾಹುಲ್ ಗಾಂಧಿಗೆ ನಿಜವಾಗಲೂ ಧೈರ್ಯವಿದ್ದರೇ ಆರೋಪ ಸಾಬೀತು ಪಡಿಸಲಿ

Shilpa D

ನವದೆಹಲಿ: ನ್ಯಾಷನಲ್ ಹೆರಾಲ್ಡ್  ಪ್ರಕರಣ ಪ್ರಧಾನಿ ಕಾರ್ಯಾಲಯದಿಂದ ನಡೆದಿರುವ ಪಿತೂರಿ ಎಂದು ಆರೋಪಿಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಧೈರ್ಯವಿದ್ದರೇ ತಾವು ಮಾಡಿರುವ ಆರೋಪವನ್ನು ಸಾಬೀತು ಪಡಿಸಲಿ ಎಂದು ಕೇಂದ್ರ ಸರ್ಕಾರ ಸವಾಲು ಹಾಕಿದೆ.

ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಶೇ.100ರಷ್ಟು ಪ್ರಧಾನಿ ಕಚೇರಿಯಿಂದ ನಡೆಯುತ್ತಿರುವ ರಾಜಕೀಯ ಪಿತೂರಿ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ,  ನಿಜವಾಗಲೂ ರಾಹುಲ್ ಗಾಂಧಿಗೆ ಧೈರ್ಯವಿದ್ದರೇ ಈ ವಿಷಯದ ಬಗ್ಗೆ  ಸಂಸತ್ತಿನಲ್ಲಿ ಚರ್ಚಿಸಲಿ,  ಜೊತೆಗೆ ತಾವು ಮಾಡಿರುವ ಆರೋಪವನ್ನು ಸಾಬೀತು ಪಡಿಸಲಿ, ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಒದಗಿಸಲಿ ಎಂದು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಂಸತ್ ಕಲಾಪವನ್ನು ಸಮಯವನ್ನು ವ್ಯರ್ತ ಮಾಡುತ್ತಿದೆ ಎಂದು ದೂರಿದ್ದಾರೆ.

SCROLL FOR NEXT