ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಕಾರುಗಳನ್ನು ನಿಷೇಧಿಸುವ ಬಗೆಗಿನ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಟಿ. ಎಸ್.ಠಾಕೂರ್ ನೇತೃತ್ವದ ಪೀಠ ಮುಂದಿನ ಮಂಗಳವಾರ ವಿಚಾರಣೆ ನಡೆಸಲಿದೆ.
ಪರಿಸರವಾದಿ ಎಂ.ಸಿ.ಮೆಹ್ತಾ 1984ರಲ್ಲ ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು. ಸದರಿ ಪಿಐಎಲ್ಗೆ ಸಂಬಂಧಿಸಿದಂತೆ, ದೆಹಲಿ ಪ್ರವೇಶಕ್ಕೆ ಎಲ್ಲಾ ರೀತಿಯ ಡೀಸೆಲ್ ಚಾಲಿತ ವಾಹನಗಳಿಗೂ ಆರು ವಾರಗಳ ಕಾಲ ನಿಷೇಧ ವಿಧಿಸಿ, ಅದರ ಪರಿಣಾಮದ ಅಧ್ಯಯನ ನಡೆಸಸಬೇಕೆಂದು ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದಲ್ಲಿ ನೇಮಿಸಲಾಗಿದ್ದ ಅಮಿಕಸ್ ಕ್ಯೂರಿ ನೀಡಿದ ಸಲಹೆಯನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪಿಕೊಂಡಿದೆ.
6 ಸಾವಿರ ಬಸ್ಗಳು: ಸರಿ ಮತ್ತು ಬೆಸ ಸಂಖ್ಯೆಗಳ ವಾಹನಗಳ ಚಾಲನೆ ಬಗ್ಗೆ ಮುಂದಿನ ಜನವರಿಯಲ್ಲಿ ನಿಯಮ ಜಾರಿಗೆ ಬರಲಿದೆ. ಹೀಗಾಗಿ ದೆಹಲಿ ಸರ್ಕಾರ ಹೆಚ್ಚುವರಿಯಾಗಿ 6 ಸಾವಿರ ಬಸ್ಗಳನ್ನು ನಿಯೋಜಿಸಲು ನಿರ್ಧರಿಸಿದೆ.