ರಾಂಚಿ: ತನ್ನ ಕೊಠಡಿಗೆ ನುಗ್ಗಿ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಮಹಿಳೆಯೊಬ್ಬರು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಜಾರ್ಖಂಡ್‍ನ ಹಾರ್ಮು ಹೌಸಿಂಗ್ ಕಾಲೊನಿಯಲ್ಲಿ ನಡೆದಿದೆ.
ಬುಧವಾರ ಮುಂಜಾವಿನಲ್ಲಿ ಮಹಿಳೆಯಿದ್ದ ಮನೆಗೆ ನುಗ್ಗಿದ 24 ವರ್ಷದ ಮನೋಜ್ ಕುಮಾರ್, ಒಳಗಿನಿಂದ ಬಾಗಿಲು ಹಾಕಿ ಆಕೆಯ ಮೇಲೆ ಅತ್ಯಾಚಾರವೆಸಗಿದ. ಘಟನೆಯಿಂದ ಆಕ್ರೋಶಗೊಂಡ ಮಹಿಳೆ, ಕೈಗೆ ಸಿಕ್ಕಿದ ಸುತ್ತಿಗೆಯಿಂದ ಆತನ ಮುಖ ಕ್ಕೆ ಬಾರಿಸಿದ್ದು, ತೀವ್ರ ಗಾಯಗೊಂಡ ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಆಕೆ ಹೊರಗಿನಿಂದ ಬಾಗಿಲು ಹಾಕಿ, ಮಾರನೇ ದಿನ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.