ದೇಶ

ಮಹಾರಾಷ್ಟ್ರದಲ್ಲಿ ಮಕ್ಕಳಿಗಾಗಿ 'ಗುಡ್ ಟಚ್, ಬ್ಯಾಡ್ ಟಚ್‌' ಆಂದೋಲನ

Lingaraj Badiger

ಮುಂಬೈ: ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಮಹಾರಾಷ್ಟ್ರದ ವೈದ್ಯರ ತಂಡವೊಂದು ರಾಜ್ಯಾದ್ಯಂತ ಇಂದಿನಿಂದ 'ಗುಡ್ ಟಚ್ ಬ್ಯಾಡ್ ಟಚ್‌' ಆಂದೋಲನ ಆರಂಭಿಸಿದೆ.

'5ರಿಂದ 10 ವರ್ಷದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಿಂದ ನಾವು ತೀವ್ರ ಆತಂಕಗೊಂಡಿದ್ದೇವೆ. ಹೀಗಾಗಿ ಈ ಆಂದೋಲನ ಆರಂಭಿಸಲು ನಾವು ನಿರ್ಧರಿಸಿದೆವು' ಎಂದು ವೈದ್ಯರ ರಾಜ್ಯ ವೈದ್ಯಕೀಯ ಸಂಘದ ಮುಖ್ಯಸ್ಥ ಸಾಗರ್ ಮುಂದಡ ಅವರು ಹೇಳಿದ್ದಾರೆ.

'ಇಂದಿನಿಂದ ನಾವು ಗುಡ್ ಟಚ್ ಬ್ಯಾಡ್ ಟಚ್ ಆಂದೋಲನ ಆರಂಭಿಸಿದ್ದು, ಈ ತಿಂಗಳ ಅಂತ್ಯದವರೆಗೆ ಇದು ನಡೆಯಲಿದೆ. ಈ ವೇಳೆ ವೈದ್ಯರು 5ರಿಂದ 10ವರ್ಷದ ಮಕ್ಕಳಿಗೆ ಹಾಗೂ ಪೋಷಕರಿಗೆ ಗುಡ್ ಟಚ್ ಬ್ಯಾಡ್ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ' ಎಂದರು.

'ಬೇರೆಯವರ ತೊಡೆಯ ಮೇಲೆ ಕುಳಿತುಕೊಳ್ಳದಂತೆ, ಮಕ್ಕಳು ಇತರರ ಮುಂದೆ ಬಟ್ಟೆ ಕಳಚುವುದು ಹಾಗೂ ಧರಿಸದಿರುವಂತೆ ಹಾಗೂ ಅಪರಿಚಿತರೊಂದಿಗೆ ಕಳುಹಿಸದಿರುವಂತೆ' ಪೋಷಕರಿಗೆ ಸೂಚಿಸಲಾಗುವುದು ಎಂದು ಮುಂದಡ ಅವರು ತಿಳಿಸಿದ್ದಾರೆ.

SCROLL FOR NEXT