ಉತ್ತರ ಪ್ರದೇಶ ಡಿಜಿಪಿ ಜಗಮೋಹನ್ ಯಾದವ್(ಸಂಗ್ರಹ ಚಿತ್ರ) 
ದೇಶ

ರಾಮರಾಜ್ಯದಲ್ಲೂ ಅತ್ಯಾಚಾರ ನಡೆಯುತ್ತಿತ್ತು: ಉತ್ತರ ಪ್ರದೇಶ ಡಿಜಿಪಿ

ಇಷ್ಟು ದಿನ ಉತ್ತರ ಪ್ರದೇಶ ರಾಜಕಾರಣಿಗಳು ಮಾತ್ರ ಜನರು ಹುಬ್ಬೇರಿಸುವಂತಹ ಹೇಳಿಕೆ ನೀಡುತ್ತಿದ್ದರು, ಈಗ ಅಧಿಕಾರಿಗಳು ಸಹ ರಾಜರಾಣಿಗಳಿಗೆ ಪೈಪೋಟಿ ನೀಡಲು ಪ್ರಾರಂಭಿಸಿದ್ದಾರೆ.

ಲಖನೌ: ಇಷ್ಟು ದಿನ ಉತ್ತರ ಪ್ರದೇಶ ರಾಜಕಾರಣಿಗಳು ಮಾತ್ರ ಜನರು ಹುಬ್ಬೇರಿಸುವಂತಹ ಹೇಳಿಕೆ ನೀಡುತ್ತಿದ್ದರು, ಈಗ ಅಧಿಕಾರಿಗಳು ಸಹ ರಾಜರಾಣಿಗಳಿಗೆ ಪೈಪೋಟಿ ನೀಡಲು ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶ ಡಿಜಿಪಿ ಜಗಮೋಹನ್ ಯಾದವ್ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತನಾಡುತ್ತ ರಾಮರಾಜ್ಯದಲ್ಲೂ ಅತ್ಯಾಚಾರ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಡಿಜಿಪಿ, ರಾಮ ರಾಜ್ಯದಲ್ಲೂ ಅತ್ಯಾಚಾರಗಳು ನಡೆಯುತ್ತಿತ್ತು. ಅತ್ಯಾಚಾರ ಎಲ್ಲಾ ರಾಜ್ಯಗಳಲ್ಲೂ ನಡೆಯುತ್ತಿರುವ ಸಾಮಾನ್ಯ ಸಂಗತಿ, ಮಹಿಳೆಯರ ವಿರುದ್ಧ  ನಡೆಯುವ ದೌರ್ಜನ್ಯಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಪೋಲಿಸರಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಜಗಮೋಹನ್ ಯಾದವ್ ಇನ್ನು ಒಂದು ತಿಂಗಳ ಸೇವಾವಧಿ ಇದ್ದು, ಈ ಹಿಂದೆಯೂ ಅನೇಕ ಬಾರಿ ವಿವಾದಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದರು. ರಾಮರಾಜ್ಯದಲ್ಲೂ ಅತ್ಯಾಚಾರ ನಡೆಯುತ್ತಿತ್ತು ಎಂಬ ಡಿಜಿಪಿ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ವಿಜಯ್ ಬಹದ್ದೂರ್ ಪಾಠಕ್ ಇದೊಂದು ಬೇಜವಾಬ್ದಾರಿಯುತ ಹೇಳಿಕೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT