ಚೆನ್ನೈ ಪ್ರವಾಹ: ಪುನರ್ವಸತಿಗೆ ವಾಲ್ಮಾರ್ಟ್ ನಿಂದ ರು.1 ಕೋಟಿ ನೆರವು
ಬೃಹತ್ ರಿಟೇಲ್ ಕಂಪನಿ ವಾಲ್ ಮಾರ್ಟ್ ಚೆನ್ನೈನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಅವಾಂತರ ಪರಿಹಾರ ನಿಧಿಗೆ ರು.1 ಕೋಟಿ ನೆರವು ನೀಡಿದೆ. ಕಂಪನಿಯ ಸಾಮಾಜಿಕ...
ನವದೆಹಲಿ: ಬೃಹತ್ ರಿಟೇಲ್ ಕಂಪನಿ ವಾಲ್ ಮಾರ್ಟ್ ಚೆನ್ನೈನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಅವಾಂತರ ಪರಿಹಾರ ನಿಧಿಗೆ ರು.1 ಕೋಟಿ ನೆರವು ನೀಡಿದೆ. ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಈ ಕೊಡುಗೆ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆರೋಗ್ಯ ಕಿಟ್, ಆಹಾರ ಪೊಟ್ಟಣಗಳು, ಶುದ್ಧ ಕುಡಿವ ನೀರು ಮತ್ತು ಟಾರ್ಪಾಲಿನ್ಗಳನ್ನು ವಿತರಿಸಲು ಈ ನೆರವು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಹಲವಾರು ಸಿಬ್ಬಂದಿ ಸಹ ಬಟ್ಟೆ ಸೇರಿದಂತೆ ಇತರೆ ತುರ್ತು ಉತ್ಪನ್ನಗಳನ್ನು ಎನ್ಜಿಒಗಳು ಮತ್ತಿತರ ಸಂಸ್ಥೆಗಳ ಮೂಲಕ ಸಂತ್ರಸ್ತರಿಗೆ ತಲುಪಿಸಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.