ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರ ಸಂಬಂಧ ಉಸ್ತುವಾರಿ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಸಚಿವರೊಬ್ಬರನ್ನು ನೇಮಕ ಮಾಡಿದೆ.
ಮಹಾರಾಷ್ಟ್ರ ಸರ್ಕಾರ ಸಹಕಾರ ಸಚಿವ ಚಂದ್ರಕಾಂತ ಪಾಟೀಲ ಅವರನ್ನು ಗಡಿ ವಿವಾದದ ಕುರಿತಾದ ಎಲ್ಲ ಸಮಸ್ಯೆ, ನ್ಯಾಯಾಲಯದ ಮುಂದಿರುವ ವಿಚಾರ ಗ-ಳನ್ನು ನಿರ್ವಹಿಸಲು ನೇಮಕ ಮಾಡಿ ಆದೇಶಹೊರ ಡಿಸಿದೆ.
ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿರುವ ಮರಾಠಿ ಭಾಷಿಕರ ಪ್ರದೇಶವಿರುವ 800 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಎಂಇಎಸ್ ಬೇಡಿಕೆ ಇಟ್ಟಿದೆ.
ಗಡಿ ವಿವಾದ ಸುಪ್ರೀಂನ ಮೆಟ್ಟಿಲು ಹತ್ತಿದ್ದು, ಸರ್ಕಾರಗಳು ಗಡಿ ವಿವಾದ ಕುರಿತಂತೆ ದಾಖಲೆ, ಸಾಕ್ಷಿ, ಪ್ರಮಾಣಪತ್ರಗಳ ಸಂಗ್ರಹಣೆಯಲ್ಲಿ ತೊಡಗಿವೆ. ಇಂತಹ ಸಂದರ್ಭದಲ್ಲೇ ಗಡಿ ವಿವಾದ ಕುರಿತಂತೆ ಸಚಿವರೊಬ್ಬರನ್ನು ನೇಮಿಸಲಾಗಿದೆ.