ನವದೆಹಲಿ: ಮಹತ್ವದ ತೀರ್ಪೊಂದರಲ್ಲಿ ಬುಧವಾರ ಸುಪ್ರೀಂಕೋರ್ಟ್, ದೇವಾಲಯಗಳ ಅರ್ಚಕರ ನೇಮಕಾತಿ ಹಿಂದೂ ಪದ್ಧತಿ ಹಾಗೂ ಆಗಮ ಶಾಸ್ತ್ರದ ಅನುಸಾರವೇ ನಡೆಯಬೇಕು ಎನ್ನುವ ಮೂಲಕ, ಯಾವುದೇ ಜಾತಿಯ ಅರ್ಹ ವ್ಯಕ್ತಿ ಅರ್ಚಕ ವೃತ್ತಿ ಮಾಡಬಹುದು ಎಂಬ ತಮಿಳುನಾಡು ಸರ್ಕಾರದ ಆದೇಶವನ್ನು ರದ್ದುಪಡಿಸಿದೆ.
ಅರ್ಚಕ ನೇಮಕಾತಿಗೆ ಆಯಾ ದೇವಸ್ಥಾನಗಳಲ್ಲಿ ರೂಡಿsಯಲ್ಲಿರುವ ಪದ್ಧತಿ ಅನುಸರಿಸುವುದು ಸಂವಿಧಾನದ ಸಮಾನತೆಯ ಹಕ್ಕಿನ ಉಲ್ಲಂಘನೆ ಯಾಗದು ಎಂದೂ ಇದೇ ವೇಳೆ ಸುಪ್ರೀಂ ಅಭಿಪ್ರಾಯಪಟ್ಟಿದೆ. ಆ ಮೂಲಕ, ಆಗಮ ಶಾಸ್ತ್ರ ಹಾಗೂ ಪುರಾತನ ಶಾಸ್ತ್ರಗ್ರಂಥಗಳ ಅಧ್ಯಯನ ಹಾಗೂ ಸೂಕ್ತ ತರಬೇತಿಯ ಅರ್ಹತೆ ಇರುವ ಯಾವುದೇ ಜಾತಿಯ ವ್ಯಕ್ತಿಯನ್ನು ಅರ್ಚಕರನ್ನಾಗಿ ನೇಮಕ ಮಾಡಬಹುದು ಎಂಬ ತಮಿಳುನಾಡು ಡಿಎಂಕೆ ಸರ್ಕಾರದ 2006ರ ಆದೇಶವನ್ನು ರದ್ದುಮಾಡಿದೆ.
ಸರ್ಕಾರದ ಆದೇಶದ ವಿರುದ್ಧ ಅರ್ಚಕ ಸಮುದಾಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ರಂಜನ್ ಗೊಗೋಯï ನೇತೃತ್ವದ ಪೀಠ ಈ ಆದೇಶ ನೀಡಿದ್ದು, ಸಾಮಾಜಿಕ ಸುಧಾರಣೆ ನಿಟ್ಟಿನಲ್ಲಿ ತಾನು ಈ ಆದೇಶ ಮಾಡಿರುವುದಾಗಿ ಹೇಳಿದ ರಾಜ್ಯ ಸರ್ಕಾರದ ವಾದವನ್ನು ತಳ್ಳಿಹಾಕಿದೆ.
ಇದೇ ವೇಳೆ, ಸರ್ಕಾರದ ಆದೇಶದಿಂದ ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂಬ ಅರ್ಚಕ ಸಮುದಾಯದ ವಾದನ್ನು ಪೀಠ ಪುರಸ್ಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics