ಪಟನಾ: ಬಿಹಾರದಲ್ಲಿ ಏಪ್ರಿಲ್ 1 ರಿಂದ ದೇಸೀ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಲು ನಿತೀಶ್ ಕುಮಾರ್ ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಮುಂದಾಗಿರುವ ಸರ್ಕಾರ ಈ ಕಾರ್ಯದ ಮೊದಲ ಹಂತವಾಗಿ ಮುಂದಿನ ವರ್ಷ ಏಪ್ರಿಲ್ 1 ರಿಂದ ದೇಸೀ ಮದ್ಯಕ್ಕೆ ನಿಷೇಧ ಹೇರಿದೆ.
ಆದಾಗ್ಯೂ, ಭಾರತ ನಿರ್ಮಿತ ವಿದೇಶಿ ಮದ್ಯ (ಐಎಂಎಫ್ಎಲ್) ನಿಯಮಿತ ಸರ್ಕಾರಿ ಮದ್ಯ ಅಂಗಡಿಗಳಲ್ಲಿ ಲಭ್ಯವಾಗಲಿದೆ.
ಏಪ್ರಿಲ್ 1, 2016ರ ಆರ್ಥಿಕ ವರ್ಷ ಆರಂಭದಿಂದಲೇ ರಾಜ್ಯದಲ್ಲಿ ದೇಸಿ ಮದ್ಯಕ್ಕೆ ನಿಷೇಧ ಹೇರಲಾಗುವುದು ಎಂದು ಶನಿವಾರ ಸಂಜೆ ನಡೆದ ಸಂಪುಟ ಸಭೆಯ ನಂತರ ಮಾತನಾಡಿದ ನಿತೀಶ್ ಹೇಳಿದ್ದಾರೆ.
ಏಪ್ರಿಲ್ 1 ರ ನಂತರ ರಾಜ್ಯದ ಮುನಿಸಿಪಲ್ ಮತ್ತು ಟೌನ್ ಕೌನ್ಸಿಲ್ ಪ್ರದೇಶಗಳಲ್ಲಿರುವ ಬಿಹಾರ್ ಸ್ಟೇಟ್ ಬಿವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (ಬಿಸ್ಬಿಸಿಎಲ್) ನಲ್ಲಿ ಭಾರತ ನಿರ್ಮಿತ ವಿದೇಶೀ ಮದ್ಯಗಳು ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics