ಸಾಂದರ್ಭಿಕ ಚಿತ್ರ 
ದೇಶ

ಜಿಎಸ್‍ಟಿ ಕನಸು ಭಗ್ನ: ಸರ್ವಪಕ್ಷ ಸಭೆಯಲ್ಲಿ ಕೇವಲ 6 ಮಸೂದೆಗಳ ಅಂಗೀಕಾರಕ್ಕೆ ಅಸ್ತು

ಪ್ರಸಕ್ತ ಅಧಿವೇಶನದಲ್ಲಿಯೆೀ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ...

ನವದೆಹಲಿ: ಪ್ರಸಕ್ತ ಅಧಿವೇಶನದಲ್ಲಿಯೆೀ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ಮುಂದಿನ ವಿತ್ತೀಯ ವರ್ಷದಿಂದಲೇ ನೂತನ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಎನ್‍ಡಿಎ ಸರ್ಕಾರದ ಪ್ರಯತ್ನ ಕೊನೆಗೂ ವಿಫಲವಾಗಿದೆ. 
ಶುಕ್ರವಾರ ಸಭಾಪತಿ ಹಮೀದ್ ಅನ್ಸಾರಿ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಜಿಎಸ್‍ಟಿ ಮಸೂದೆಗೆ ಅಂಗೀಕರಿಸಲು ಸಮ್ಮತಿಸಲಿಲ್ಲ. ಆದರೆ, ಉಳಿದ 6 ಮಸೂದೆಗಳ ಅಂಗೀಕಾರಕ್ಕೆ ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳು ಒಪ್ಪಿವೆ. 
ಹೀಗಾಗಿ ಸರ್ವಪಕ್ಷ ಸಭೆ ಭಾಗಶಃ ಯಶಸ್ವಿಯಾಗಿದೆ. ಸೋಮವಾ ರದಿಂದ ಉಳಿದ 3 ದಿನಗಳ ಸುಗಮ ಕಲಾಪಕ್ಕೆ ಒಪ್ಪಿದ ಪ್ರತಿಪಕ್ಷಗಳು ಮಸೂದೆಗಳ ಅಂಗೀಕರಿಸಲು ಸಹಕಾರ ನೀಡಲಿವೆ. ಪಟ್ಟು ಬಿಡದ ಕಾಂಗ್ರೆಸ್: ಉತ್ಪಾದಕ ರಾಜ್ಯಗಳು ಶೇ.1ರಷ್ಟು ಹೆಚ್ಚುವರಿ ತೆರಿಗೆ ಕೈಬಿಡಬೇಕು, ನೂತನ ತೆರಿಗೆ ವ್ಯವಸ್ಥೆಯಡಿ ತೆರಿಗೆ ಮಿತಿ ವಿಧಿಸಬೇಕು ಮತ್ತು ತೆರಿಗೆ ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಾಂಗ ಸ್ವರೂಪದ ಪ್ರಾಧಿಕಾರ ರಚಿಸಬೇಕೆಂಬ ವಿಚಾರದಲ್ಲಿ ಕಾಂಗ್ರೆಸ್ ತನ್ನ ಪಟ್ಟು ಸಡಿಲಿಸಿಲ್ಲ. 
ಬಿಜೆಪಿ ಶೇ.1ರಷ್ಟು ತೆರಿಗೆ ಪ್ರಸ್ತಾಪ ಕೈಬಿಡಲು ಸಿದ್ಧವಾಗಿದ್ದರೂ, ತೆರಿಗೆ ಮಿತಿ ನಿಗದಿಗೆ ಸಂಬಂಧಿಸಿ ಅದು ರಾಜಿಯಾಗಲು ಸಿದ್ಧವಿಲ್ಲ. ಜತೆಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತು ಅರುಣಾಚಲ ಪ್ರದೇಶದ ಬೆಳವಣಿಗೆಗಳು ಕಾಂಗ್ರೆಸ್ ನಾಯಕರನ್ನು ಕೆರಳಿಸಿದ್ದು, ಅಸಹಕಾರ ಧೋರಣೆಗೆ ಕಾರಣ ಎನ್ನಲಾಗಿದೆ. 
ಹೀಗಾಗಿ 2016-17ನೇ ಸಾಲಿನಿಂದಲೇ ಜಿಎಸ್‍ಟಿ ಜಾರಿ ಮಾಡಬೇಕೆಂಬ ಸರ್ಕಾರದ ಆಸೆ ಕೈಗೂಡುತ್ತಿಲ್ಲ. ಸಭೆ ನಂತರವೂ ಜಿಎಸ್‍ಟಿ ಕುರಿತು ಪ್ರತಿಪಕ್ಷ ನಾಯಕರ ಮನವೊಲಿಸುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಪ್ರಯತ್ನ ಸಫಲವಾಗಿಲ್ಲ. 
ಯಾವ್ಯಾವ ವಿಧೇಯಕಕ್ಕೆ ಒಪ್ಪಿಗೆ?: ಪರಿಶಿಷ್ಟಜಾತಿ, ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆ, ಧನವಿನಿಯೋಗ ಮಸೂದೆಗಳು, ಅಪಹರಣ ನಿಗ್ರಹ ಮಸೂದೆ, ಅಣುಶಕ್ತಿ ತಿದ್ದುಪಡಿ ಮಸೂದೆ, ವಾಣಿಜ್ಯ ನ್ಯಾಯಾಲಯಗಳ ಮಸೂದೆ, ಪಂಚಾಯ್ತಿ ಮತ್ತು ಸಂಧಾನ ತಿದ್ದುಪಡಿ ಮಸೂದೆಗಳಿಗೆ ಅನುಮೋದನೆ ನೀಡಲಾಗುತ್ತದೆ. 
ಇದೇ ವೇಳೆ, ಬಾಲಕಾರ್ಮಿಕ (ನಿರ್ಬಂಧ ಮತ್ತು ನಿಯಂತ್ರಣ)ತಿದ್ದುಪಡಿ ಮಸೂದೆ, ಶಿಳ್ಳೆಗಾರರ (ವಿಶಲ್ ಬ್ಲೋವರ್ಸ್) ಸುರಕ್ಷತೆ ತಿದ್ದುಪಡಿ ಮಸೂದೆ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಸೂದೆ ಕುರಿತಂತೆ ಚರ್ಚೆಗೆ ನಿರ್ಧರಿಸಲಾಗಿದೆ.
ಜತೆಗೆ, ಬೆಲೆ ಏರಿಕೆ, ಅರುಣಾಚಲದ ಬೆಳವಣಗೆಗಳು, ಪ್ರಾಕೃತಿಕ ವಿಕೋಪ, ಅಸಹಿಷ್ಣುತೆ ಕುರಿತಂತೆ ಚರ್ಚಿಸಲು ಸಮ್ಮತಿಸಲಾಗಿದೆ. ಸಭೆ ನಂತರ ಮಾತನಾಡಿದ, ಅನ್ಸಾರಿ ಸಭೆ ಚೆನ್ನಾಗಿ ನಡೆಯಿತು ಎಂದಷ್ಟೇ ಹೇಳಿದರು. ಸಭೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆಯಿತು.
ಹಲವು ಪಕ್ಷಗಳ ಸದಸ್ಯರು ಕಲಾಪ ಸುಗಮವಾಗಿ ನಡೆಯದಿರುವ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಕಲಾಪ ಸುಗಮವಾಗಿ ನಡೆಯಬೇಕೆಂದು ನಿರ್ಧರಿಸಲಾಯಿತು. ಉಳಿದ 3 ದಿನಗಳಲ್ಲಿ ಸಂಜೆಯ ನಂತರವೂ ಕಲಾಪ ನಡೆಸಿ ಬಾಕಿ ಇರುವ ಮಸೂದೆಗಳನ್ನು ಅನುಮೋದಿಸಲು ನಿರ್ಧರಿಸಲಾಯಿತು ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು. 
ಕಲಾಪ ಸಲಹಾ ಸಮಿತಿಯಲ್ಲಿ ಏನೇನು ಚರ್ಚಿಸಿದ್ದೆವೋ ಅದೆಲ್ಲವನ್ನು ಚರ್ಚಿಸಿದೆವು. ಜಿಎಸ್‍ಟಿ ಬಗ್ಗೆ ಚರ್ಚೆ ನಡೆದಿಲ್ಲ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್