ಪಟನಾ/ಖಗಾರಿಯಾ: ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್ ನ ಏಳು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ.
15707 ಯುಪಿ ಕಟಿಹಾರ್- ಅಮೃತಸರ ಅಮೃಪಾಲಿ ಎಕ್ಸ್‌ಪ್ರೆಸ್‌ನ ಎಸಿ-2 (ಒಂದು ಬೋಗಿ), ಎಸಿ-3 (ಒಂದು ಬೋಗಿ) ಮತ್ತು 5 ಸ್ಲೀಪರ್ ಕೋಚ್‌ಗಳು ಪಟ್ರಾಹ ಮತ್ತು ಗೌಚಾರಿ ಮಧ್ಯೆ ಹಳಿತಪ್ಪಿದೆ. ಈ ಘಟನೆ ರಾತ್ರಿ 1. 14ಕ್ಕೆ ನಡೆದಿತ್ತು ಎಂದು ಈಸ್ಟ್ ಸೆಂಟ್ರಲ್ ರೈಲ್ವೇಯ ಚೀಫ್ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಅರವಿಂದ್ ಕುಮಾರ್ ರಜಕ್ ಹೇಳಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.