ಈದ್ ಮಿಲಾದ್ ಮದ್ಯ ಮಾರಾಟಕ್ಕಿಲ್ಲ ನಿರ್ಬಂಧ 
ದೇಶ

'ಈದ್ ಮಿಲಾದ್ ವೇಳೆ' ಮದ್ಯಕ್ಕಿಲ್ಲ ನಿರ್ಬಂಧ: 'ಮಹಾ' ಸರ್ಕಾರದ ವಿರುದ್ಧ ಅಸಮಾಧಾನ

ಈದ್ ಮಿಲಾದ್ ದಿನದ ಮುಂಜಾನೆ ವರೆಗೂ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ.

ಮುಂಬೈ: ಈದ್ ಮಿಲಾದ್ ದಿನದ ಮುಂಜಾನೆ ವರೆಗೂ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವುದಕ್ಕೆ ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ. ಕ್ರಿಸ್-ಮಸ್ ಹಾಗೂ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ತಡರಾತ್ರಿ ವರೆಗೂ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್ ಹಾಗು ಎಂಐಎಂ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಡಿ.24 ರಂದು(ಈದ್ ಮಿಲಾದ್) ಡಿ.25 (ಕ್ರಿಸ್ ಮಸ್) ಡಿ.31 ರಂದು ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುವ ಅವಧಿಗೆ ವಿನಾಯ್ತಿ ನೀಡಿ, ತಡ ರಾತ್ರಿ ಒಂದು ಗಂಟೆ ವರೆಗೂ ವರೆಗೂ ಕಾರ್ಯನಿರ್ವಹಿಸಲು ಅನುಮತಿ ನೀಡಿ ಮಹಾರಾಷ್ಟ್ರದ ಗೃಹ ಇಲಾಖೆ ಆದೇಶ ಹೊರಡಿಸಿದೆ.     

ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, ಮಹಾರಾಷ್ಟ್ರ ಸರ್ಕಾರ ಮುಸ್ಲಿಮರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ, ಆರ್ ಎಸ್ ಎಸ್ ನ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಬಿಜೆಪಿ ಸರ್ಕಾರ ಮುಸ್ಲಿಮರನ್ನು ದೇಶದ ಎರಡನೇ ದರ್ಜೆಯ ನಾಗರಿಕರು ಎಂದು ಗುರಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಜೈನ ಸಮುದಾಯ 'ಪರ್ಯುಶಾನ್' ಎಂಬ ಉಪವಾಸ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಮಹಾರಾಷ್ಟ್ರ ಸರ್ಕಾರ ಮಾಂಸ ಮಾರಾಟವನ್ನು ನಿಷೇಧಿಸಿತ್ತು. ಆದರೆ ಮುಸ್ಲಿಮರ ಹಬ್ಬ ಈದ್-ಮಿಲಾದ್ ದಿನದಂದು ಮದ್ಯ ನಿಷೇಧಿಸಿಲ್ಲ  ಎಂದು ಎಂಐಎಂ ಶಾಸಕ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬಲೂಚಿಸ್ತಾನ ಪ್ರತ್ಯೇಕ ದೇಶ: ಸೌದಿ ಅರೇಬಿಯಾದಲ್ಲಿ ನಿಂತು ಸಲ್ಮಾನ್ ಖಾನ್ ಅಚ್ಚರಿ ಹೇಳಿಕೆ- ವಿಡಿಯೋ ವೈರಲ್!

ಬಿಜೆಪಿಯಿಂದಲೇ ಹಣ ಕಲೆಕ್ಷನ್: ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಆರೋಪಕ್ಕೆ ಸಿಎಂ ತಿರುಗೇಟು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT