ನವದೆಹಲಿ: ದೆಹಲಿಯ ಹೈಕೋರ್ಟ್ ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ.
ದೆಹಲಿ ಕರ್ಕರಡೂಮಾ ಹೈಕೋರ್ಟ್ ನ ಹಾಲ್ ನಂ. 73ರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಯಲ್ಲಿ ಪೇದೆಯೊಬ್ಬರಿಗೆ ನಾಲ್ಕು ಗುಂಡುಗಳು ತಗುಲಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ಪೇದೆ ಹಾಗೂ ನ್ಯಾಯಾಲಯದ ಕ್ಲರ್ಕ್ ಗೆ ಗಾಯವಾಗಿದೆ.
ಕೋರ್ಟ್ ನಲ್ಲಿ ದುಷ್ಕರ್ಮಿಗಳು 10 ಸುತ್ತು ಗುಂಡು ಹಾರಿಸಿದ್ದರು. ಈ ಸಂಬಂಧ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.