ಸಾಂದರ್ಭಿಕ ಚಿತ್ರ 
ದೇಶ

ಅಪ್ಪನ ಕೊಲೆ ಸೇಡಿಗಾಗಿ 12 ವರ್ಷ ಕಾದ ಪುತ್ರ

ಇದು ಸೇಡಿನ ಸುಳಿಗೆ ಸಿಕ್ಕ ಬಿಸಿರಕ್ತದ ಹುಡುಗನೊಬ್ಬನ ಪಾತಕದ ಕಥೆ. 12 ವರ್ಷದವನಿದ್ದಾಗ ಕಣ್ಣೆದುರೇ ನಡೆದ ತನ್ನ ತಂದೆಯ ಕೊಲೆ...

ಮೊರಾದಾಬಾದ್: ಇದು ಸೇಡಿನ ಸುಳಿಗೆ ಸಿಕ್ಕ ಬಿಸಿರಕ್ತದ ಹುಡುಗನೊಬ್ಬನ ಪಾತಕದ ಕಥೆ. 12 ವರ್ಷದವನಿದ್ದಾಗ ಕಣ್ಣೆದುರೇ ನಡೆದ ತನ್ನ ತಂದೆಯ ಕೊಲೆ ಘಟನೆಯ ಸೇಡು ಆತನ ಮನಸ್ಸೊಳಗೆ 12 ವರ್ಷಗಳ ಕಾಲ ಕುದಿಯುತ್ತಲೇ ಇತ್ತು ಹಾವಿನ ದ್ವೇಷದಂತೆ. ಕೊಲೆ ಮಾಡಿದಾತನಿಗೆ ಅಂತ್ಯ ಹಾಡುವ ದಿನಕ್ಕಾಗಿ ಕಾದಿದ್ದ. ಅಂತೂ ಆತನ ಸ್ನೇಹ ಸಂಪಾದಿಸಿ, ತನ್ನ ಮನೆಗೇ ಕರೆದು, ಕುಡಿಸಿ ಚಾಕುವಿನಿಂದ ಭೀಕರವಾಗಿ ಕತ್ತರಿಸಿ ಹಾಕುವ ಮೂಲಕ ಸೇಡು ತೀರಿಸಿಕೊಂಡ. 
ಈ ಬಗ್ಗೆ `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 12 ವರ್ಷದ ತನ್ನ ಕಾಯುವಿಕೆಗಾಗಿ ಶವವನ್ನು 12 ತುಂಡುಗಳಾಗಿ ಕತ್ತರಿಸಿ, ಪಾಲಿಬ್ಯಾಗ್‍ನಲ್ಲಿ ಹಾಕಿ ನದಿ ದಡದಲ್ಲಿ ಎಸೆದುಬಂದ.
ಈ ವಿಚಿತ್ರ ಘಟನೆಯ ಪಾತ್ರದಾರಿಗಳು ತನ್ನ ತಂದೆಯ ಕೊಲೆ ಸೇಡು ತೀರಿಸಿಕೊಂಡ 24 ವರ್ಷದ ಆಲಂ ಖಾನ್ ಹಾಗೂ ತಾನೇ ಕೊಂದವನ ಮಗನ ಕೈಯಲ್ಲೇ ಕೊಲೆಯಾದ ಮೊಹಮ್ಮದ್ ರಾಯಸ್. ದೇಹದ ತುಂಡುಗಳು ನದಿ ದಡದಲ್ಲಿ ಕಂಡಾಗ ಜನ ಬೆಚ್ಚಿ ಪೊಲೀಸರಿಗೆ ವಿಷಯ ತಿಳಿಸಿದರು. 
ಆಗ ದೇಹವನ್ನು ಗುರುತಿಸಿದ ಕೊಲೆಯಾದವನ ಸಹೋದರ, ತನ್ನ ಅಣ್ಮ ಕೊನೆಯ ಬಾರಿಗೆ ಕಂಡದ್ದು ಆಲಂ ಖಾನ್ ಮನೆಯಲ್ಲಿ ಎಂದಾಗ ಸುಳಿವು ಬೆನ್ನತ್ತಿಗೆ ಪೊಲೀಸರ ಮುಂದೆ ಆಲಂ ಖಾನ್ ತಪ್ಪೊಪ್ಪಿಕೊಂಡ. ಅಲ್ಲದೆ, ಹನ್ನೆರಡು ವರ್ಷಗಳ ಆಸೆ ಈಡೇರಿದೆ. ಆ ಬಗ್ಗೆ ನನಗೆ ಖುಷಿ ಇದೆ ಎಂದಿದ್ದಾನೆ ಆಲಂ ಖಾನ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!