ಹೈದ್ರಾಬಾದ್: ಹೈದ್ರಾಬಾದ್ ಹೈದ್ರಾಬಾದ್‌ನವರಿಗಿರುವುದು, ಹೊರಗಿನವರಿಗಲ್ಲ ಎಂದು ಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಹೇಳಿದ್ದಾರೆ.
ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪರೇಷನ್ (ಜಿಹೆಚ್‌ಎಂಸಿ) ಚುನಾವಣೆಯಲ್ಲಿ ಹೊರಗಿನವರು ಸ್ಪರ್ಧಿಸಿದ್ದರೆ, ಅವರನ್ನು ತಿರಸ್ಕರಿಸಿ ಎಂದು ಒವೈಸಿ ಜನತೆಗೆ ಆಹ್ವಾನ ನೀಡಿದ್ದಾರೆ.
ಅದೇ ವೇಳೆ ಮಜಲಿಸ್ ಇ ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ) 150 ಸೀಟುಗಳಲ್ಲಿ 70-75 ಸೀಟುಗಳಿಗೆ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಹೈದ್ರಾಬಾದ್‌ನಲ್ಲಿ ಗುರುವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಒವೈಸಿ, ಈ ಬಾರಿ ಹೈದ್ರಾಬಾದ್ ಮೇಯರ್ ಸ್ಥಾನ ಎಂಐಎಂ ನಾಯಕನಿಗೆ ಒಲಿಯಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿ ಜಿಹೆಚ್‌ಎಂಸಿ ಅಧಿಕಾರ ಗಿಟ್ಟಿಸಿಕೊಂಡಿದ್ದ ಎಂಐಎಂ ನ ಮಜೀದ್ ಹುಸೈನ್ ಮೇಯರ್ ಆಗಿ ಮೂರು ವರ್ಷ ಪೂರೈಸಿದ್ದು, ಮುಂದಿನ ಮೇಯರ್ ಕೂಡಾ ಎಂಐಎಂ ನಾಯಕರೇ ಆಗುವ ಸಾಧ್ಯತೆ ಇದೆ ಎಂದು ಒವೈಸಿ ಹೇಳಿದ್ದಾರೆ.