ನರೇಂದ್ರ ಮೋದಿ 
ದೇಶ

ಶೀಘ್ರದಲ್ಲೇ ಪ್ರಧಾನಿಯಿಂದ ನಿಮಗೆ ನೇರ ಎಸ್ಎಂಎಸ್, ಇ ಮೇಲ್!

ಪ್ರಧಾನಿ ನರೇಂದ್ರ ಮೋದಿಯವರೇ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆ ನಿರ್ವಹಿಸುತ್ತಾರೆ ಎಂಬುದು ಈಗ ಹಳೆಯ ಸುದ್ದಿ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರೇ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆ ನಿರ್ವಹಿಸುತ್ತಾರೆ ಎಂಬುದು ಈಗ ಹಳೆಯ ಸುದ್ದಿ. ಹೊಸ ಸುದ್ದಿ ಏನಪ್ಪ ಅಂದರೆ ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ತುರ್ತು ಸಂದೇಶ, ಹೊಸ ನೀತಿಗಳ ಬಗ್ಗೆ ಇನ್ಮುಂದೆ ನಿಮಗೆ ಪ್ರಧಾನಿಯವರೇ ಇ ಮೇಲ್ ಅಥವಾ ಎಸ್ಎಂಎಸ್ ಮಾಡುತ್ತಾರೆ.
ಡಿಜಿಟಲ್ ಇಂಡಿಯಾದ ಅಂಗವಾಗಿ ಕಳೆದ ವರ್ಷವೇ ಚಾಲನೆಗೊಂಡಿದ್ದ ಇ ಸಂಪರ್ಕ್ ಆಂದೋಲನವನ್ನು ಈಗ ಖಾಸಗಿ ನಾಗರಿಕರಿಗೂ ವಿಸ್ತರಿಸುತ್ತಿದ್ದು, ಅದರಲ್ಲೂ ಉದ್ಯೋಗಿಗಳಿಗೆ ಹೆಚ್ಚಿನ ಗಮನ ಕೊಡಲು ಮುಂದಾಗಿದೆ. ದೇಶದ ವಿವಿಧ ವಿಷಯಗಳು, ನೀತಿ, ನಿಯಮ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ ನಾಗರಿಕರೊಂದಿಗೆ ನೇರ ಸಂಪರ್ಕ ಸಾಧಿಸಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. 
ಇ ಸಂಪರ್ಕ ದಾಖಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ 80 ಲಕ್ಷ ಇ ಮೇಲ್ ವಿಳಾಸ ಹಾಗೂ ಒಂದು ಕೋಟಿ ಮೊಬೈಲ್ ಸಂಖ್ಯೆಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ಸಚಿವಾಲಯದಿಂದ ಇದುವರೆಗೆ 42 ಕೋಟಿ ಇ ಮೇಲ್ಸ್ ಮತ್ತು ಎಸ್ಎಂಎಸ್ ಕಳುಹಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT