ಗೆದ್ದ ಅಭ್ಯರ್ಥಿ ಮಗುವಿನ ಮೇಲೆ ಅತ್ಯಾಚಾರ, ನೊಂದ ಬಾಲಕಿ ಆತ್ಮಹತ್ಯೆ (ಸಂಗ್ರಹ ಚಿತ್ರ) 
ದೇಶ

ಬಾಲಕಿಯ ಅತ್ಯಾಚಾರ, ಸಾವಿಗೆ ಕಾರಣವಾಯ್ತು ಚುನಾವಣೆ ಸೋಲು..!

ಚುನಾವಣೆಯ ಸೋಲಿನ ದ್ವೇಷದಿಂದಾಗಿ ಸೋತ ಅಭ್ಯರ್ಥಿಯೊಬ್ಬ ಗೆದ್ದ ಅಭ್ಯರ್ಥಿಯ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗ ಧಾರುಣ ಘಟನೆ ವಾರಣಾಸಿಯಲ್ಲಿ ನಡೆದಿದೆ...

ವಾರಣಾಸಿ: ಚುನಾವಣೆಯ ಸೋಲಿನ ದ್ವೇಷದಿಂದಾಗಿ ಸೋತ ಅಭ್ಯರ್ಥಿಯೊಬ್ಬ ಗೆದ್ದ ಅಭ್ಯರ್ಥಿಯ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗ ಧಾರುಣ  ಘಟನೆ ವಾರಣಾಸಿಯಲ್ಲಿ ನಡೆದಿದೆ.

ವಾರಣಾಸಿಯ ಮಿಜಾಪುರ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ರಾಜಕೀಯ ದ್ವೇಷದ ಹಿನ್ನಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.  ಇಲ್ಲಿನ ಪಾದಾರಿ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯೊಬ್ಬರು ಜಯ ಸಾಧಿಸಿದಕ್ಕೆ ಆಕ್ರೋಶಗೊಂಡ ಸೋತ ಅಭ್ಯರ್ಥಿಯ ಬೆಂಬಲಿಗರು ಆಕೆಯ 11 ವರ್ಷದ ಪುತ್ರಿಯನ್ನು  ಬಲವಂತವಾಗಿ ದೂರದ ನಿರ್ಜನ ಪ್ರದೇಶಕ್ಕೆ ಕರೆದ್ಯೂಯ್ದು ಸಾಮಾಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರದ ಬಳಿಕ ಸ್ಥಳೀಯ ಪಾದಾರಿ ಪೋಲಿಸ್ ಠಾಣೆಯಲ್ಲಿ ನೊಂದ ಬಾಲಕಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾಳೆ. ಆದರೆ ಪೊಲೀಸರು ಕ್ರಮಕ್ಕೆ  ಮುಂದಾಗದ ಹಿನ್ನಲೆಯಲ್ಲಿ ಮಾನಸಿಕವಾಗಿ ಘಾಸಿಗೊಂಡ ಬಾಲಕಿ ಕಳೆದ ಶುಕ್ರವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ದುಷ್ಕರ್ಮಿಗಳು  ಬಲವಂತವಾಗಿ ಎಳೆದ್ಯೂಯ್ದು ಸಾಮೂಜಿಕ ಅತ್ಯಾಚಾರವೆಸಗಿದ್ದ ಬಗ್ಗೆ ಠಾಣೆಯಲ್ಲಿ ಪೋಲಿಸರು ಗಂಭೀರವಾಗಿ ಪರಿಗಣಿಸದೇ ಕೇವಲ ಮಾತಿನಲ್ಲಿ ಬುದ್ದಿವಾದ ಹೇಳಿ ಕಳುಹಿಸಿ ಯಾವುದೇ ಕ್ರಮ  ಕೈಗೊಳ್ಳದೇ ಇದ್ದ ಪರಿಣಾಮ ಬಾಲಕಿ ಆತ್ಮಹತ್ಯೆಗೆ ಶರಾಣಾಗಿದ್ದಾಳೆ ಎಂದು ಬಾಲಕಿಯ ಸಂಬಂಧಿಕರು ಹೇಳಿದ್ದಾರೆ.

ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಎಚ್ಚೆತ್ತುಕೊಂಡಿರುವ ಪಾದಾರಿ ಪೊಲೀಸ್  ಠಾಣೆಯ ಪೊಲೀಸರು ಕಾರ್ಯಪ್ರವೃತರಾಗಿ ಕೂಡಲೆ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸ್ಥಳೀಯ ಬಿಡಿಸಿ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಯ ಸಂಬಂಧಿಕರು  ಎಂದು ತಿಳಿದು ಬಂದಿದೆ. ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಗೆದ್ದ ಮಹಿಳಾ ಅಭ್ಯರ್ಥಿ ಪುತ್ರಿ ಮೇಲೆ ದುಷ್ಕರ್ಮಿಗಳು ಈ ರೀತಿಯ ಕೃತ್ಯವೆಸಗಿದ್ದಾರೆ. ಘಟನೆ ಸಂಬಂಧ ಪಾಪು  ಬಾಹೈಲಿಯಾ, ಬಿಂದು ಬಾಹೈಲಿಯಾ ಎಂಬಾ ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಅರವಿಂದ್ ಸೇನ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!