ತಿರುಪತಿ: ಪ್ರಸಿದ್ಧ ಯಾತ್ರಾ ಸ್ಥಳಗಳಾಗಿರುವ ತಿರುಪತಿ ಮತ್ತು ಶಿರ್ಡಿ ನಡುವೆ ಪ್ರಯಾಣಿಸುವ ವರಿಗೆ ಸಂತಸದ ಸುದ್ದಿ.
ಈ ಸ್ಥಳಗಳ ನಡುವೆ ವಾರಕ್ಕೊಮ್ಮೆ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದೆ. ಈ ರೈಲಿಗೆ ಕರ್ನಾಟಕದ ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿಯಲ್ಲಿ ನಿಲುಗಡೆ ಒದಗಿಸಲಾಗಿದೆ.
ಇದರಿಂದ ರಾಜ್ಯದ ಪ್ರವಾಸಿಗರಿಗೂ ಅನುಕೂಲವಾಗಲಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಈ ಸೇವೆ ಉದ್ಘಾಟಿಸಿದ್ದಾರೆ. ಒಟ್ಟು 34 ಸ್ಥಳಗಳಲ್ಲಿ ರೈಲಿಗೆ ನಿಲುಗಡೆ ನೀಡಲಾಗಿದೆ. ಜ.5ರಿಂದ ಅನ್ವಯವಾಗುವಂತೆ ತಿರುಪತಿಯಿಂದ ಬೆಳಗ್ಗೆ 7ಕ್ಕೆ ಹೊರಡಲಿದೆ. ಮಾರನೇ ದಿನ ಮಧ್ಯಾಹ್ನ 12.15ಕ್ಕೆ ಶಿರ್ಡಿ ತಲುಪಲಿದೆ.