ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ತಿರುಪತಿಯಲ್ಲಿ ಜನವರಿ 1ರಂದು ವಿಐಪಿ ದರ್ಶನ ರದ್ದು

ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನ ಬಯಸುವ ವಿಐಪಿ ಯಾತ್ರಾರ್ಥಿಗಳಿಗೆ ಕಹಿ ಸುದ್ದಿ...

ಸಾಂದರ್ಭಿಕ ಚಿತ್ರ
Mainashree
Updated On : 30 Dec 2015, 12:58 pm
ತಿರುಪತಿ: ತಿರುಮಲ ತಿರುಪತಿ ತಿಮ್ಮಪ್ಪನ ದರ್ಶನ ಬಯಸುವ ವಿಐಪಿ ಯಾತ್ರಾರ್ಥಿಗಳಿಗೆ ಕಹಿ ಸುದ್ದಿ.
ಹೊಸ ವರ್ಷ ದಿನದಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವಿಐಪಿ ಪಾಸ್ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಅವಕಾಶವಿಲ್ಲ. ವಿಐಪಿಗಳೂ ಕೂಡ ಸಾಮಾನ್ಯರಂತೆ ದರ್ಶನ ಮಾಡಬೇಕಿದೆ. 
ತಿರುಪತಿ ಶ್ರೀನಿವಾಸನ ದರ್ಶನ ಪಡೆಯಲು ವಿಐಪಿಗಳಿಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗುತಿತ್ತು. ಆದರೆ, ಈ ಬಾರಿ ಹೊಸ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಜನವರಿ 1ರಂದು ವಿಐಪಿ ಪಾಸ್ ರದ್ದು ಮಾಡಲು ತಿರುಮಲ ತಿರುಪತಿ ದೇವಸ್ಥಾನಂ(TTD) ನಿರ್ಧರಿಸಿದೆ. 

Advertisement

Advertisement

ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ನೂಗುನುಗ್ಗಲು ಹೆಚ್ಚಾಗುತ್ತದೆ. ಈ ಹಿನ್ನಲೆಯಲ್ಲಿ ವಿಐಪಿ ದರ್ಶನ ರದ್ದುಗೊಳಿಸಲು ಟಿಟಿಡಿ ನಿರ್ಧರಿಸಿದೆ. ಅಷ್ಟೇ ಅಲ್ಲದೇ, ಬೆಟ್ಟದಲ್ಲಿ ವಿಐಪಿಗಳಿಗೆ ನೀಡುವ ಸೌಲಭ್ಯವನ್ನು ಕಡಿತಗೊಳಿಸಲು ನಿರ್ಧಾರ ತೆಗೆದುಕೊಂಡಿದೆ ಎಂದು ಟಿಟಿಡಿ ಪಿಆರ್ ಓ ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement