ದ್ವಿಚಕ್ರ ಸವಾರ, ಮಹಿಳೆಯರಿಗೆ ವಿನಾಯಿತಿ ಏಕೆ?: ಕೇಜ್ರಿವಾಲ್ ಗೆ ಹೈಕೋರ್ಟ್ ಪ್ರಶ್ನೆ 
ದೇಶ

ದ್ವಿಚಕ್ರ ಸವಾರ, ಮಹಿಳೆಯರಿಗೆ ವಿನಾಯಿತಿ ಏಕೆ?: ಕೇಜ್ರಿವಾಲ್ ಗೆ ಹೈಕೋರ್ಟ್ ಪ್ರಶ್ನೆ

ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಆಮ್‌ ಆದ್ಮಿ ಸರ್ಕಾರ ಕೈಗೊಂಡಿರುವ 'ಸಮ' ಮತ್ತು 'ಬೆಸ' ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ದ್ವಿಚಕ್ರ ಹಾಗೂ ಮಹಿಳೆಯರಿಗೆ ನೀಡಿರುವ ವಿನಾಯಿತಿ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ...

ನವದೆಹಲಿ: ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಆಮ್‌ ಆದ್ಮಿ ಸರ್ಕಾರ ಕೈಗೊಂಡಿರುವ 'ಸಮ' ಮತ್ತು 'ಬೆಸ' ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ದ್ವಿಚಕ್ರ ಹಾಗೂ ಮಹಿಳೆಯರಿಗೆ ನೀಡಿರುವ ವಿನಾಯಿತಿ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ದೆಹಲಿ ಹೈ ಕೋರ್ಟ್ ಬುಧವಾರ ಪ್ರಶ್ನೆ ಮಾಡಿದೆ.

ವಾಯುಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಜಾರಿಗೆ ತಂದ ಸಮ, ಬೆಸ ನಿಯಮ ಕುರಿತಂತೆ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಈ ನಿಯಮ ಕುರಿತಂತೆ ಇಂದು ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯವು ನಿಯಮದಲ್ಲಿ ಮಹಿಳೆ ಹಾಗೂ ದ್ವಿಚಕ್ರ ಸವಾರರಿಗೆ ಯಾವ ಕಾರಣಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದೆ.

ವಾಯುಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಸರ್ಕಾರವು ವಾಯುಮಾಲಿನ್ಯ ನಿಯಂತ್ರಣ ಮಾಡಲು ಸಮ ಮತ್ತು ಬೆಸ ಸಂಖ್ಯೆಗಳ ಕಾರುಗಳ ಸಂಚಾರ ನಿಯಮವನ್ನು ಘೋಷಿಸಿತ್ತು. ಈ ನಿಯಮಗಳು ಜನವರಿ 1 ರಿಂದ ಜಾರಿಯಾಗಲಿದೆ. ಇದರಂತೆ ನಿಯಮದ ಬ್ಲ್ಯೂಪ್ರಿಂಟ್ ವೊಂದನ್ನು ಕೇಜ್ರಿವಾಲ್ ಅವರು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ನಿಯಮದಲ್ಲಿ ಮಹಿಳೆ, ದ್ವಿಚಕ್ರವಾಹನ, ಅಗ್ನಿ ಶಾಮಕದಳ, ಪೊಲೀಸ್, ಆ್ಯಂಬುಲೆನ್ಸ್, ಲೋಕಸಭೆ ಸ್ಪೀಕರ್, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸುಪ್ರೀಂ-ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಾಯಿತಿ ನೀಡಲಾಗಿತ್ತು.

ಈ ನಿಯಮವನ್ನು ಜನವರಿ 1 ರಿಂದ 15ರವರೆಗಿ ಜಾರಿಗೊಳಿಸಲಾಗುತ್ತಿದ್ದು, ತದನಂತರ ನಿಯಮಗಳ ಬಗ್ಗೆ ಮೌಲ್ಯಮಾಪನ ಮಾಡಿ ಧೀರ್ಘಕಾಲಿಕ ಜಾರಿ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಕೇಜ್ರಿವಾಲ್ ಅವರು ಹೇಳಿದ್ದಾರೆ.

ಈ ನಿಯಮ ಕುರಿತಂತೆ ದೆಹಲಿಯಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಪ್ರಸ್ತುತ ಸಂಚಾರಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದ್ದು, ಮಾಲಿನ್ಯ ತಡೆಗಟ್ಟಲು ಸರ್ಕಾರ ಕೆಟ್ಟ ನಿರ್ಧಾರಗಳನ್ನು ಕೈಗೊಳಅಳುತ್ತಿದೆ. ಮಾಲಿನ್ಯವೇ ಇಲ್ಲದಂತೆ ಮಾಡಲು ಯಾವುದೇ ಪರಿಹಾರವಿಲ್ಲ ಎಂಬ ಹಲವು ಟೀಕೆಗಳು ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT