ದೇಶ

5 ಸಾವಿರ ಕೋಟಿಗೆ ಸೋಲಾರ್ ನೆರವು ಏರಿಕೆ

Vishwanath S

ನವದೆಹಲಿ: ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಗ್ರಿಡ್‍ಗೆ ಸಂಪರ್ಕ ಹೊಂದಿರುವ ರೂಪ್‍ಟಾಪ್ ಮತ್ತು ಸಣ್ಣ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನೀಡುವ ಹಣಕಾಸು ನೆರವನ್ನು ರು.5,000 ಕೋಟಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಭೆ ನೆರವನ್ನು ಈಗಿರುವ ರು.600 ಕೋಟಿಯಿಂದ ರು.5,000 ಕೋಟಿಗೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿತು. ಇದರಿಂದ ಮುಂದಿನ ಐದು ವರ್ಷಗಳಲ್ಲಿ 4200 ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ರೂಪ್‍ಟಾಪ್ ವ್ಯವಸ್ಥೆಯನ್ನು ಅಳವಡಿಸಬಹುದಾಗಿದೆ.

SCROLL FOR NEXT