ದೇಶ

ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೈದ ಕೃಷಿಕರ ಮಕ್ಕಳಿಗೆ ಸಿದ್ಧಿವಿನಾಯಕ ದೇಗುಲದಿಂದ ಸ್ಕಾಲರ್‌ಶಿಪ್

Rashmi Kasaragodu
ಮುಂಬೈ: ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೃಷಿಕರ ಮಕ್ಕಳಿಗೆ ಸಹಾಯ ಮಾಡಲು ಮುಂಬೈನ ಸಿದ್ಧಿ ವಿನಾಯಕ ದೇವಾಲಯ ಟ್ರಸ್ಟ್ ಮುಂದಾಗಿದೆ. ಸಿದ್ಧಿವಿನಾಯಕ್ ಸ್ಕಾಲರ್‌ಶಿಪ್ ಯೋಜನೆಯನ್ನು ಆರಂಭಿಸಿರುವ ಟ್ರಸ್ಟ್ ಆತ್ಮಹತ್ಯೆಗೈದ ಕೃಷಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ರು. 1 ಕೋಟಿ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದೆ.
ರೈತರ ಮಕ್ಕಳಿಗೆ ಪದವಿ ಪಡೆಯುವವರೆಗೆ ಆರ್ಥಿಕ ಸಹಾಯ ನೀಡಲಾಗುವುದು.
ಈ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರದ ನಿಯಮ ಮತ್ತು ಕಾನೂನು ಇಲಾಖೆ ಸಮ್ಮತಿ  ನೀಡಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ರೈತರ ಮಕ್ಕಳ ಹೆಸರನ್ನು ಸಂಗ್ರಹಿಸಿ ದೇವಾಲಯದ ಟ್ರಸ್ಟ್‌ಗೆ ಕಳುಹಿಸಲು ಕೋರಲಾಗಿದೆ.
ಮುಂಬೈನ ಸಿದ್ಧಿ ವಿನಾಯಕ ದೇಗುಲದ ವಾರ್ಷಿಕ ಆದಾಯ ರು. 65 ಕೋಟಿಯಷ್ಟಿದೆ. 
1997ರಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 70,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
SCROLL FOR NEXT