ನವದೆಹಲಿ: ಸಂಸತ್ ಭವನದ ಕ್ಯಾಂಟಿನ್‍ನಲ್ಲಿ ಆಹಾರವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ದೇಶಾದ್ಯಂತ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಅವರು ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಇಲ್ಲಿ ಆಹಾರ ಬೆಲೆ ಇನ್ನು ಮುಂದೆ ತುಟ್ಟಿಯಾಗಲಿದೆ. 6 ವರ್ಷ ಗಳ ಬಳಿಕ ಇದೇ ಮೊದಲ ಬಾರಿ ಸಂಸತ್ ಕ್ಯಾಂಟಿನ್ ಆಹಾರ ದರಪರಿಷ್ಕರಣೆ ಮಾಡಿದೆ. ಇನ್ನು ಮುಂದೆ ಕಾಲ ಕಾಲಕ್ಕೆ ದರ ಪರಿಷ್ಕರಣೆಯಾಗಲಿದೆ ಎಂದು ಲೋಕಸಭೆ ಕಾರ್ಯದರ್ಶಿ ತಿಳಿಸಿದ್ದಾರೆ.
ಹೊಸ ದರಪಟ್ಟಿಯಂತೆ, ವೆಜ್ ಥಾಲಿ ರು.30 ಆಗಲಿದೆ, ಈ ಹಿಂದೆ ರು.18 ಇತ್ತು. ರು.33 ಇದ್ದ ನಾನ್‍ವೆಜ್ ಥಾಲಿ ರು.60 ಆಗಲಿದೆ. ರು.61 ಇದ್ದ ದಿನದ ಒಟ್ಟು 3 ಊಟ ರು.90 ಆಗಲಿದೆ.