ಬರಾಕ್ ಒಬಾಮ 
ದೇಶ

ಅಮೆರಿಕ-ಭಾರತ ಮಿತ್ರರಾದರೆ ಚೀನಾಗೇಕೆ ಆತಂಕ: ಒಬಾಮಾ

ವಾಷಿಂಗ್ಟನ್: 66ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತದೊಂದಿಗಿನ ತಮ್ಮ ಬಾಂದವ್ಯವನ್ನು ಮತ್ತಷ್ಟು ಉತ್ತಮಗಳಿಸಿದರ ಬಗ್ಗೆ ಚೀನಾ ಆತಂಕ ವ್ಯಕ್ತಪಡಿಸಿತ್ತು.

ಭಾರತ-ಅಮೆರಿಕ ಬಾಂಧವ್ಯದ ಬಗ್ಗೆ ಚೀನಾ ಅಸಮಾಧಾನ ಗೊಂಡಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಒಬಾಮ, ಉಭಯ ರಾಷ್ಟ್ರಗಳೂ ನಿಕಟ ಬಾಂಧವ್ಯ ಹೊಂದಿರುವುದು ಸತ್ಯ. ಆದರೆ ಈ ಬಗ್ಗೆ ಚೀನಾ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಷಿಂಗ್ಟನ್-ನವದೆಹಲಿ ಉತ್ತಮ ಬಾಂಧವ್ಯ ಏರ್ಪಟಿದೆ. ಆದರೆ, ಇದಕ್ಕೆ ಚೀನಾ ಏಕೆ ಗಾಬರಿ ಅಥವಾ ಅಸಮಾಧಾನ ತೋರಿಸಬೇಕು ಎಂದು ಪ್ರಶ್ನಿಸಿರುವ ಒಬಾಮ, ಚೀನಾದ ಈ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ ಎಂದರು.

ಭಾರತದ ಜತೆ ನಮ್ಮ ಸಂಬಂಧ ಅತ್ಯಂತ ನಿಕಟವಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ನಮ್ಮ ಸಂಬಂಧಕ್ಕೂ, ಚೀನಾ ಅಸಮಾಧಾನಕ್ಕೂ ಯಾವುದೇ ಸಂಬಂಧವೂ ಇಲ್ಲ ಎಂದು ಒಬಾಮ ಸ್ಪಷ್ಟಪಡಿಸಿದ್ದಾರೆ.

ತಮ್ಮ ಚೀನಾ ಭೇಟಿಯನ್ನು ಪ್ರಸ್ತಾಪಿಸಿರುವ ಅಧ್ಯಕ್ಷ ಒಬಾಮ, ಕಳೆದ ನವೆಂಬರ್‌ನಲ್ಲಿ ನಾನು ಚೀನಾಕ್ಕೆ ಭೇಟಿ ನೀಡಿದ್ದು, ಅದು ಸಂಪೂರ್ಣ ಯಶಸ್ವಿಯಾಗಿದೆ. ನನ್ನ ಭೇಟಿಯ ಸಂದರ್ಭ ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಅವರ ಜತೆ ಹಲವು ಮಹತ್ವದ ಮಾತುಕತೆಗಳನ್ನು ನಡೆಸಿದ್ದೇನೆ. ಮಾತುಕತೆಯ ಮೂಲಕ ಚೀನಾ-ಅಮೆರಿಕ ಬಾಂಧವ್ಯ ಗಟ್ಟಿಗೊಂಡಿದೆ. ಹಾಗಾಗಿ ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಚೀನಾ ಆತಂಕಪಡುವುದು ಬೇಡ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದಲ್ಲಿ NI-MO ಮೋಡಿ: NDA ಪ್ರಚಂಡ ಗೆಲುವು; ಅತಿದೊಡ್ಡ ಪಕ್ಷವಾಗಿ BJP; ಕುಸಿದ ತೇಜಸ್ವಿ ಯಾದವ್; Congress ಸ್ಥಿತಿ ಹೀನಾಯ!

ಬಿಹಾರ ಚುನಾವಣೆ 2025: ಸೋತು ಗೆದ್ದ ತೇಜಸ್ವಿ ಯಾದವ್; ಕುಟುಂಬದ ಭದ್ರಕೋಟೆ ರಾಘೋಪೂರ್ ಉಳಿಸಿಕೊಳ್ಳಲು ಸುಸ್ತೋ ಸುಸ್ತು!

Bihar Election Results: ಅಲಿನಗರ ಕ್ಷೇತ್ರದಲ್ಲಿ BJP ಅಭ್ಯರ್ಥಿ ಮೈಥಿಲಿ ಠಾಕೂರ್ ಇತಿಹಾಸ ಸೃಷ್ಟಿ; ಅತಿ ಕಿರಿಯ ವಯಸ್ಸಿನ ಶಾಸಕಿ!

ಬಿಹಾರದಲ್ಲಿ Congress ಹೀನಾಯ ಹಿನ್ನಡೆ: 'ಸೋಲಿನ ಸರದಾರ' ರಾಹುಲ್ ಗಾಂಧಿಗೆ ಇದು '95 ನೇ ಸೋಲು'!

Video: ಕಂಬಳಿ ಹೊದ್ದು ದಂಪತಿಗಳ 'ಕಾಮಕೇಳಿ', ಪೊದೆಯಲ್ಲಿ ಮತ್ತೊಂದು ಜೋಡಿಯ 'ಕಳ್ಳಾಟ': ಜಿಲ್ಲಾಸ್ಪತ್ರೆ ವಿರುದ್ಧ ಕೆಂಗಣ್ಣು

SCROLL FOR NEXT