ನವದೆಹಲಿ: ದೆಹಲಿಯಲ್ಲಿ ಚುನಾವಣಾ ಪ್ರಚಾರ ರಂಗೇರಿದ್ದು, ಪ್ರಚಾರ ಭರಾಟೆ ಭರದಿಂದ ಸಾಗಿದೆ. ದ್ವಾರಕದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಆಪ್ ವಿರುದ್ಧ ವಾಗ್ದಾಳಿ ನಡೆಸಿದರೆ, ಇದೇ ಮೊದಲ ಬಾರಿ ಪ್ರಚಾರದ ಅಖಾಡಕ್ಕೆ ಇಳಿದಿರುವ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಬದಾರ್ಪುರ್ನಲ್ಲಿ ಮಾತನಾಡಿ, ಬಿಜೆಪಿ, ಆಪ್ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಹೇಳಿದ್ದೇನು?
- ಧರಣಿಗಿಂತ ನಿಮಗೆ ಅಭಿವೃದ್ಧಿ ಬೇಕಿದ್ದರೆ ಆಪ್ ಹಾಗೂ ಕಾಂಗ್ರೆಸ್ ಅನ್ನು ದೂರವಿಟ್ಟು ನಮ್ಮ ಪಕ್ಷಕ್ಕೆ ಅಧಿಕಾರ ಕೊಡಿ.
- ತೆರೆಯ ಹಿಂದೆ ಆಪ್ ಹಾಗೂ ಕಾಂಗ್ರೆಸ್ ಕಳ್ಳಸ್ನೇಹ ಮಾಡಿಕೊಂಡಿದ್ದರಿಂದ ಮತ್ತೆ ಚುನಾವಣೆ ಕಾಣುವಂತಾಗಿದೆ.
- ಆಪ್ ಪಕ್ಷಗಳ ಮುಖಂಡರು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕೆಂದು ವದಂತಿ ಹರಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
- ಸರ್ಕಾರ ನಡೆಸುವುದು ಗಂಭೀರ ವಿಷಯ. ಮಾಧ್ಯಮಗಳಲ್ಲಿ ಸ್ಥಳ ಗಿಟ್ಟಿಸಿಕೊಳ್ಳುವುದು ಮುಖ್ಯವಲ್ಲ. ಜನರ ಹೃದಯದಲ್ಲಿ ಸ್ಥಳ ಗಿಟ್ಟಿಸಿಕೊಳ್ಳಬೇಕು.
- ನನ್ನ ಅದೃಷ್ಟ ದೇಶಕ್ಕೆ ಅನುಕೂಲ ಮಾಡಿಕೊಡುತ್ತಿದೆ ಎಂದಾದರೆ, ನೀವೇಕೆ ನತದೃಷ್ಟ ಸರ್ಕಾರವನ್ನು ಆಯ್ಕೆ ಮಾಡುತ್ತೀರಿ?
ಸೋನಿಯಾ ಹೇಳಿದ್ದೇನು?
- ಟೊಳ್ಳು ಭರವಸೆಗಳನ್ನು ನೀಡುವ ಆಪ್, ಬಿಜೆಪಿ ಸರ್ಕಾರಕ್ಕೆ ಮತ ನೀಡಬೇಡಿ.
- ಒಂದು ಪಕ್ಷ ಪ್ರಚಾರಪ್ರಿಯ ಹಾಗೂ ಮತ್ತೊಂದು ಪಕ್ಷ ಧರಣಿಪ್ರಿಯ. ದೆಹಲಿಗೆ ಉತ್ತಮ ಸರ್ಕಾರ ಬೇಕು, ಸುಳ್ಳು ಭರವಸೆಗಳಲ್ಲ.
- ಮತದಾರರೇ, ನೀವು ಎಚ್ಚರಿಕೆಯ ಹೆಜ್ಜೆಯನ್ನಿಡಿ, ಕೇವಲ ಘೋಷ ವಾಕ್ಯಗಳಿಂದ ಸರ್ಕಾರಗಳನ್ನು ನಡೆಸಲು ಆಗಲ್ಲ.
- ಆಪ್ ಪಕ್ಷ ನೀಡಿದ ಭರವಸೆಯಂತೆ ದೆಹಲಿಗೆ ಉತ್ತಮ ಸ್ಥಾನ ಕಲ್ಪಿಸುತ್ತದೆ ಎಂದು 2013ರಲ್ಲಿ ನಾವು ಆಪ್ಗೆ ಬೆಂಬಲ ನೀಡಿದ್ದೆವು. ಆದರೆ, ಅವರಿಗೆ ಸರ್ಕಾರವನ್ನೇ ನಡೆಸಲಾಗಲಿಲ್ಲ.
- ದೆಹಲಿ ಚುನಾವಣೆಯನ್ನು ಮುಂದೂಡುತ್ತಿದ್ದ ಬಿಜೆಪಿ, ರಾಷ್ಟ್ರಪತಿ ಹೆಸರಿನಲ್ಲಿ ಇಲ್ಲಿ ಆಡಳಿತ ನಡೆಸುತ್ತಿತ್ತು.
ಸಿಖ್ ವಿರೋಧಿ ಗಲಭೆ: ಮತ್ತೆ ತನಿಖೆ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics