ನರೇಂದ್ರ ಮೋದಿ 
ದೇಶ

ದೇಶ ಅಚಾತುರ್ಯವನ್ನು ಕ್ಷಮಿಸುತ್ತದೆ, ನಂಬಿಕೆದ್ರೋಹವನಲ್ಲ: ಮೋದಿ

ಆಮ್ ಆದ್ಮಿ ಪಕ್ಷ ನಕಲಿ ಕಂಪನಿಗಳ ಮೂಲಕ ದೇಣಿಗೆ ಪಡೆದಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.

ನವದೆಹಲಿ: ಆಮ್ ಆದ್ಮಿ ಪಕ್ಷ ನಕಲಿ ಕಂಪನಿಗಳ ಮೂಲಕ ದೇಣಿಗೆ ಪಡೆದಿದೆ ಎಂಬ ಆರೋಪವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ದೆಹಲಿಯ ರೋಹಿನಿಯಲ್ಲಿ ಪಕ್ಷದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆ ಒಂದು ವೇಳೆ ಆಚಾತುರ್ಯವನ್ನು ಕ್ಷಮಿಸುತ್ತಾರೆ ಹೊರತು ನಂಬಿಕೆದ್ರೋಹವನ್ನಲ್ಲ ಎಂದು ಆಪ್ ವಿರುದ್ಧ ವಾಗ್ದಾಳಿ ನಡೆಸಿದರು.

ದೇಣಿಗೆ ಹಣ ಪಡೆದಿರುವ ಆಪ್ ಪಕ್ಷ ಇದೀಗ ಮತ್ತೊಂದು ವರಸೆ ತೋರಿಸುತ್ತಿದೆ. ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಅಥವಾ ಆಪ್ ಯಾರು ಅತಿ ಹೆಚ್ಚು ಭ್ರಷ್ಟ ಯಾರು ಎಂಬುದು ತನಿಖೆಯಾಗಲಿ ಎಂದು ಹೇಳುತ್ತಿದೆ ಎಂದು ಮೋದಿ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಗೆದ್ದಿದ್ದ ಆಪ್ ಪಕ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲ ಪಡೆಯುವುದಿಲ್ಲ ಎಂದು ಹೇಳಿತ್ತು. ಆದರೆ ಮಾತು ಮರೆತ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ಪಕ್ಷದ ಬೇಷರತ್ತು ಬೆಂಬಲ ಪಡೆದಿದ್ದರು. ಅದನ್ನು ಪ್ರಶ್ನಿಸಿದರೆ ತಾವಾಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲ ನೀಡುವಂತೆ ಕೋರಿಲ್ಲ. ಅವರಾಗೆ ನೀಡಿದ್ದರು ಎಂದು ತಮ್ಮ ನಂಬಿಕೆದ್ರೋಹವನ್ನು ಸಮರ್ಥಿಸಿಕೊಂಡಿದ್ದರು.

ಅದರಂತೆ ಮತ್ತೊಮ್ಮೆ ಆಪ್ ಪಕ್ಷ ತಾವಾಗೆ ಯಾರನ್ನು ದೇಣಿಗೆ ನೀಡುವಂತೆ ಕೇಳಿಲ್ಲ. ಅವರಾಗೆ ನೀಡಿದರು ಎಂಬ ಸಿದ್ದ ಉತ್ತರವನ್ನು ನೀಡುತ್ತಾ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಮೋದಿ ಕಿಡಿಕಾರಿದರು.

ಕಳೆದ ಆಗಸ್ಟ್‌ನಲ್ಲಿ ಆಪ್ ಪಕ್ಷದಿಂದ ಹೊರಬಂದು ಆವಂ ಪಕ್ಷ ಸ್ಥಾಪಿಸಿಕೊಂಡಿರುವ ಕೆಲವರು ಆಮ್ ಆದ್ಮಿ ಪಕ್ಷಕ್ಕೆ 51 ಬೋಗಸ್ ಕಂಪನಿಗಳಿಂದ ಹಣ ಬಂದಿದೆ. ಈ ಪೈಕಿ ನಾಲ್ಕು ಕಂಪನಿಗಳು ತಲಾ 50 ಲಕ್ಷ ರು. ಹಣ ನೀಡಿವೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೆನೆಂದರೆ ಒಂದು ಕಂಪನಿಯ ವಿಳಾಸದಲ್ಲಂತೂ ಗುಡಿಸಲು ಪತ್ತೆಯಾಗಿದೆ ಎಂದು ಆರೋಪ ಮಾಡಿದ್ದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT