ಅರವಿಂದ್ ಕೇಜ್ರಿವಾಲ್ 
ದೇಶ

ಆಮ್ ಆದ್ಮಿ ವಿರುದ್ಧ `ಹವಾಲಾ' ಆರೋಪ

ಭ್ರಷ್ಟಾಚಾರ ವಿರೋಧ ಪಕ್ಷ ಎಂದೇ ಕರೆಸಿಕೊಂಡು ಬಂದಿರುವ ಆಮ್ ಆದ್ಮಿ ಪಕ್ಷದ ಮೇಲೆಯೇ `ಹವಾಲಾ' ಆರೋಪ ಕೇಳಿಬಂದಿದೆ...

ನವದೆಹಲಿ: ಭ್ರಷ್ಟಾಚಾರ ವಿರೋಧ ಪಕ್ಷ ಎಂದೇ ಕರೆಸಿಕೊಂಡು ಬಂದಿರುವ ಆಮ್  ಆದ್ಮಿ ಪಕ್ಷದ ಮೇಲೆಯೇ  `ಹವಾಲಾ' ಆರೋಪ ಕೇಳಿಬಂದಿದೆ. 2014ರ ಏ.5ರಂದು ರಾತ್ರೋರಾತ್ರಿ 4 ಬೋಗಸ್ ಕಂಪನಿಗಳು ತಲಾ ರು. 50 ಲಕ್ಷದಂತೆ ಒಟ್ಟು ರು. 2 ಕೋಟಿ ದೇಣಿಗೆಯನ್ನು ಆಪ್‍ಗೆ ನೀಡಿದೆ ಎಂದು ಅದೇ ಪಕ್ಷದಿಂದ ಹೊರಹೋದ ಎವಿಎಎಂ(ಅವಾಂ) ಎಂಬ ಸಂಘಟನೆ ಆರೋಪಿಸಿದೆ. ಜತೆಗೆ ಇದನ್ನು `ಮಿಡ್ ನೈಟ್ ಹವಾಲಾ' ಎಂದೂ ಕರೆದಿವೆ. ಅವಾಂ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಆಪ್ ವಿರುದ್ಧ ಹರಿಹಾಯ್ದಿದ್ದು, ಹಣ ಬಂದಿದ್ದು ಎಲ್ಲಿಂದ ಎಂದು ಪ್ರಶ್ನಿಸಿದೆ. ಜತೆಗೆ ಬೇರೆಯವರಿಗೆ ಬುದ್ಧಿ ಹೇಳುವ ಕೇಜ್ರಿವಾಲ್ ಮೇಲೆಯೇ  ಹವಾಲಾ ಆರೋಪ ಕೇಳಿಬಂದಿದೆ. ಇದಕ್ಕೆ ಅವರು ಉತ್ತರಿಸಬೇಕು ಎಂದು ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ನಾವು ಎಲ್ಲ ದೇಣಿಗೆಯನ್ನೂ ಚೆಕ್ ರೂಪದಲ್ಲಿ ಸ್ವೀಕರಿಸಿದ್ದೇವೆ. ದೇಣಿಗೆ ನೀಡಿದ ಕಂಪನಿಗಳು ಕಳ್ಳ ದಾರಿ ಹಿಡಿದಿದ್ದರೆ ಅದು ನಮ್ಮ ತಪ್ಪಲ್ಲ, ಅಂತಹ ಕಂಪನಿಗಳ ವಿರುದ್ಧ  ಸರ್ಕಾರ ಕ್ರಮ ಕೈಗೊಳ್ಳಲಿ. ನಾವು ಯಾವುದೇ ತನಿಖೆಗೂ ಸಿದ್ಧ  ಎಂದಿದ್ದಾರೆ.

ಕೇಜ್ರಿಗೆ ಕೋರ್ಟ್ ನೋಟಿಸ್:  ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರ ಅಭ್ಯರ್ಥಿತ್ವವನ್ನು ರದ್ದು ಮಾಡಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್ ಕೇಜ್ರಿವಾಲ್‍ಗೆ ನೋಟಿಸ್ ಜಾರಿ ಮಾಡಿದೆ. ತಾನು ದೆಹಲಿಯ ನಿವಾಸಿ ಎಂದು ಘೋಷಿಸುವ ಮೂಲಕ ಕೇಜ್ರಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದೇ ವೇಳೆ, ಬಿಜೆಪಿಯು ಜಾಹೀರಾತಿನಲ್ಲಿ ತನ್ನ ಸಮುದಾಯವನ್ನು ಅವಹೇಳನ ಮಾಡಿದೆ ಎಂದು ಕೇಜ್ರಿ ಆರೋಪಿಸಿದ್ದಾರೆ.

ರಾಜಿನಾಮೆ ನೀಡಿ, ವಾಪಸ್ ಪಡೆದರು!
ಬಿಜೆಪಿ ದೆಹಲಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಸೋಮವಾರ ಬೇಡಿ ಅವರ ಪ್ರಚಾರ ಉಸ್ತುವಾರಿ ನರೇಂದ್ರ ಟಂಡನ್ ರಾಜಿನಾಮೆ ನೀಡಿದ್ದರು. ಆದರೆ ಸ್ವಲ್ಪ ಹೊತ್ತಲ್ಲೇ ಅವರು ರಾಜಿನಾಮೆ ಹಿಂಪಡೆದಿದ್ದು, ಅಮಿತ್ ಶಾ ಅವರ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ