ತೈವಾನ್ ನಲ್ಲಿ ನದಿಗೆ ಬಿದ್ದ ಟ್ರಾನ್ಸ್ಏಷ್ಯಾ ಎಟಿಆರ್‌ 72600 ವಿಮಾನದಡಿಯಲ್ಲಿ ಸಿಲುಕಿರು ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಗಳು. 
ದೇಶ

ತೈವಾನ್ ನಲ್ಲಿ ನದಿಗೆ ಬಿದ್ದು ವಿಮಾನ ಪತನ: 9 ಸಾವು

58 ಜನರನ್ನು ಹೊತ್ತುಯ್ಯೋತ್ತಿದ್ದ ವಿಮಾನ ನದಿಗೆ ಬಿದ್ದು, 9 ಜನರು ಸಾವನ್ನಪ್ಪಿರುವ ಘಟನೆ ಬುಧವಾರ ತೈವಾನ್ ನ ತೈಪೆ ನಗರದಲ್ಲಿ ನಡೆದಿದೆ...

ತೈಪೆ: 58 ಜನರನ್ನು ಹೊತ್ತುಯ್ಯೋತ್ತಿದ್ದ ವಿಮಾನ ನದಿಗೆ ಬಿದ್ದು, 9 ಜನರು ಸಾವನ್ನಪ್ಪಿರುವ ಘಟನೆ ಬುಧವಾರ ತೈವಾನ್ ನ ತೈಪೆ ನಗರದಲ್ಲಿ ನಡೆದಿದೆ.

ತೈವಾನ್ ರಾಜಧಾನಿ ತೈಪೆ ನಗರ ಹೊರವಲಯದಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿ ಸಿಲುಕಿದ್ದವರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಷ್ಟು ಪ್ರಯಾಣಿಕರು ಅದರಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ದೇಶಿಯ ಹಾರಾಟದಲ್ಲಿದ್ದ ಟ್ರಾನ್ಸ್ಏಷ್ಯಾ ಎಟಿಆರ್‌ 72600 ವಿಮಾನವು ನದಿಗೆ ಉರುಳುವ ಮುನ್ನ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ತೈಪೆ ನಗರದ ಸಾಂಗ್ಶಾನ್‌ ವಿಮಾನ ನಿಲ್ದಾಣದಿಂದ ಕಿನ್‌ಮೆನ್‌ ದ್ವೀಪಕ್ಕೆ ಪ್ರಯಾಣಿಸುತ್ತಿದ್ದ ವಿಮಾನವು ಟೇಕ್‌ಆಫ್ ಆದ ಕೆಲವು ನಿಮಿಷಗಳ ಬಳಿಕ ದುರಂತಕ್ಕೀಡಾಗಿದೆ ಎಂದು ವರದಿಗಳು ಹೇಳಿವೆ.

ವಿಮಾನದಲ್ಲಿ ಸಿಲುಕಿರುವ ಪ್ರಯಾಣಿಕರ ನೆರವಿನ ಕಾರ್ಯದಲ್ಲಿ ರಕ್ಷಣಾ ತಂಡಗಳು ನಿರತವಾಗಿವೆ. ಕಳೆದ ಜುಲೈನಲ್ಲಿ ಟ್ರಾನ್ಸ್‌ಏಷ್ಯಾ ವಿಮಾನ ಪತನಗೊಂಡು 48 ಜನರು ಸಾವನ್ನಪ್ಪಿದ್ದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video