ಬಿಜೆಪಿ ರ್ಯಾಲಿ 
ದೇಶ

ಇಂದು ದೆಹಲಿ ಬಯಲಾಟಕ್ಕೆ ತೆರೆ

ದೆಹಲಿ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದ್ದು, ಗುರುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇನ್ನೇನಿದ್ದರೂ...

ನವದೆಹಲಿ: ದೆಹಲಿ ಚುನಾವಣೆಗೆ ಇನ್ನು ಎರಡೇ ದಿನ ಬಾಕಿ ಇದ್ದು, ಗುರುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇನ್ನೇನಿದ್ದರೂ ಮನೆ ಮನೆ ಪ್ರಚಾರದ ಆಟ ಮುಂದುವರಿಯಲಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಪಕ್ಷಗಳ ಮುಖಂಡರು ಪ್ರಚಾರ ನಡೆಸಿದ್ದು, ತಮ್ಮ ಪಕ್ಷದ ಪರ ಮತಯಾಚನೆ ಮಾಡಿದ್ದಾರೆ. ಮನೆ ಮನೆಯತ್ತ ಬಿಜೆಪಿ :  ಕೊನೆ ಕ್ಷಣದವರೆಗೂ ಮತದಾರನ ಮನೆಯ ಕದ ತಟ್ಟುವ ಕೆಲಸಕ್ಕೆ ಕೈ ಹಾಕಿರುವ ಬಿಜೆಪಿ ಬುಧವಾರ ಅಂಬೇಡ್ಕರ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯೊಂದಿಗೆ ಬಿರುಸಿನ ಪ್ರಚಾರ ನಡೆಸಿದೆ. ಒಂದು ಕಡೆ ಪಕ್ಷದ ಕಾರ್ಯಕರ್ತರು ಮನಮನೆಗೆ ತೆರಳಿ ಮತದಾರರನ್ನು ಒಲಿಸಲು ಯತ್ನಿಸುತ್ತಿದ್ದರೆ,
ಬಿಜೆಪಿ ಥಿಂಕ್ ಟ್ಯಾಂಕ್‍ಗಳೆಲ್ಲರೂ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಆಪ್ ವಿರುದ್ಧದ ಬಿರುಸಿನ ಪ್ರಚಾರ ಮುಂದುವರೆಸಿದ್ದಾರೆ.

ಇಂದು ದೆಹಲಿ ಬಯಲಾಟಕ್ಕೆ ತೆರೆ:  ಬಹಿರಂಗ ಪ್ರಚಾರ ಅಂತ್ಯ ಟಿ ಇನ್ನೇನಿದ್ದರೂ ಮನೆ ಮನದ ಆಟ ಮುಗಿಯುತ್ತಿಲ್ಲ ಕೆಸರೆರಚಾಟ ನಮ್ಮಿಂದ ಸ್ಥಿರ ಸರ್ಕಾರ ದೇಶ ಅಭಿವೃದ್ಧಿಯಾಗಬೇಕಿದ್ದರೆ, ಮೊದಲು ದೆಹಲಿ ಬದಲಾಗಬೇಕು. ದೆಹಲಿಯಲ್ಲಿ ಸ್ಥಿರ ಸರ್ಕಾರ ರಚನೆಯಾಗ ಬೇಕು.ಅಂಥ ಸರ್ಕಾರ ಬಿಜೆಪಿ ಯಿಂದ ಮಾತ್ರ ಕೊಡಲು ಸಾಧ್ಯ. ನಾವು ಭ್ರಷ್ಟಾಚಾರದ ಕುರಿತು ಹೇಳಿಕೆಗಳನ್ನಷ್ಟೇ ನೀಡುತ್ತಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಬಿಜೆಪಿಗೆ ಮತ ನೀಡಿದರೆ, ಅಭಿವೃದ್ಧಿಗೆ ಮತ ನೀಡಿದಂತೆ. ಬಡವರ ಉದ್ದಾರ ನಮ್ಮ ಪಕ್ಷ ದಿಂದ ಮಾತ್ರ ಸಾಧ್ಯ.ಸಮರ್ಪಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯವನ್ನು ಕಲ್ಪಿಸುತ್ತೇವೆ ಎಂದಿದ್ದಾರೆ.

ಮತಯಂತ್ರ ಸರಿಯಿದೆ

ಚುನಾವಣೆಗೆ ಬಳಸುವ ವಿದ್ಯುನ್ಮಾನ ಮತಯಂತ್ರಗಳು ಸರಿಯಾಗಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಬ್ರಹ್ಮ ಸ್ಪಷ್ಟ ಪಡಿಸಿದ್ದಾರೆ. ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಆರೋಪದ ಹಿನ್ನೆಲೆಯಲ್ಲಿ ಖುದ್ದು ಕೇಜ್ರಿವಾಲ್  ಅವರಿಗೆ ಮತ ಯಂತ್ರ ಕಾರ್ಯ ನಿರ್ವಹಿಸುವ ಬಗ್ಗೆ ವಿವರಿಸಿದ್ದಾರೆ. ಮತಯಂತ್ರದಲ್ಲಿ ಆಪ್ ಗುಂಡಿ ಒತ್ತಿದರೂ ಬಿಜೆಪಿಗೆ ಮತ ಬೀಳುವಂತೆ ಮತಯಂತ್ರಗಳನ್ನು ಮಾರ್ಪಾಡು ಮಾಡಲಾಗಿದೆ ಎಂದು ಕೇಜ್ರಿವಾಲ್ ದೂರಿದ್ದರು. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಗಳು ವ್ಯಾಪಕವಾಗಿ ಟೀಕಿಸಿದ್ದವು. ಅರವಿಂದ ಕೇಜ್ರಿವಾಲ್‍ಗೆ ಕಳೆದ ಚುನಾವಣೆಯಲ್ಲಿ 28 ಸ್ಥಾನ ತಂದುಕೊಟ್ಟಿದ್ದು ಇದೇ ಮತಯಂತ್ರಗಳೇ. ಆದರೆ, ಈ ಮತಯಂತ್ರಗಳನ್ನೇ ಅವರು ಸಂದೇಹಿಸುತ್ತಿದ್ದಾರೆ. ಆ ಮೂಲಕ ಅವರು ಚುನಾವಣಾ ಆಯೋಗದ ಪಾವಿತ್ರತೆಯನ್ನು ಪ್ರಶ್ನಿಸಿದ್ದಾರೆ ಎಂದು ಬಿಜೆಪಿ ದೂರಿತ್ತು. ಚುನಾವಣಾ ಆಯುಕ್ತರು ವಿವರ ನೀಡಿದ ನಂತರ ಕೇಜ್ರಿವಾಲ್ ಮತಯಂತ್ರಗಳ ಬಗ್ಗೆ ನಮಗೆ ಇದ್ದ ಅನುಮಾನವನ್ನು ಪರಿಹರಿಸಿ ಕೊಂಡಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ