ನವದೆಹಲಿ: ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿವೆ. ಬಹುತೇಕ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷ ಮುಂದಿದ್ದು, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಸಿಎಂ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಐದು ಮತಗಟ್ಟೆ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷದ ಗೆಲುವನ್ನು ಸೂಚಿಸುತ್ತಿವೆ. ಎಎಪಿ ಸರಳ ಬಹುಮತ ಪಡೆಯುವ ನಿರೀಕ್ಷೆ ಇದೆ. ಕಳೆದ ಬಾರಿ ಅತೀದೊಡ್ಡ ಪಕ್ಷವಾಗಿದ್ದ ಬಿಜೆಪಿ ಈ ಬಾರಿ 2ನೇ ಸ್ಥಾನಕ್ಕೆ ತೃಪ್ತಿ ಪಡಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಸಿ-ವೋಟರ್, ಇಂಡಿಯಾ ಟುಡೇ, ಎಬಿಪಿ-ನೀಲ್ಸನ್, ಆಕ್ಸಿಸ್ ಮತ್ತು ಟುಡೇಸ್ ಚಾಣಕ್ಯ ಸಮೀಕ್ಷೆಗಳಿಂದ ಈ ಮಾಹಿತಿ ಸಿಕ್ಕಿದೆ. ಆಕ್ಸಿಸ್ ಸಮೀಕ್ಷೆಯಂತೂ ಆಮ್ ಆದ್ಮಿ ಕ್ಲೀನ್ ಸ್ವೀಪ್ ಮಾಡಬಹುದೆಂದು ಅಂದಾಜಿಸಿದೆ. ಈ ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು ಮಧ್ಯಾಹ್ನ 3 ಗಂಟೆಯವರೆಗೆ ಮಾಡಲಾಗಿದೆ.
ಮತಗಟ್ಟೆ ಸಮೀಕ್ಷೆಗಳ ವಿವರ...
ಒಟ್ಟು ಕ್ಷೇತ್ರಗಳು: 70
ಬಹುಮತಕ್ಕೆ ಬೇಕಿರುವುದು 36
ಸಿ-ವೋಟರ್ ಸಮೀಕ್ಷೆ
ಎಎಪಿ: 31 - 39
ಬಿಜೆಪಿ: 27 - 35
ಕಾಂಗ್ರೆಸ್: 2 - 4
ಇತರರು: 2
ಇಂಡಿಯಾ ಟುಡೆ ಸಮೀಕ್ಷೆ
ಎಎಪಿ: 35 - 43
ಬಿಜೆಪಿ: 29
ಕಾಂಗ್ರೆಸ್: 5
ಎಬಿಪಿ-ನೀಲ್ಸನ್ ಸಮೀಕ್ಷೆ
ಎಎಪಿ: 39
ಬಿಜೆಪಿ: 28
ಕಾಂಗ್ರೆಸ್: 3
ಆಕ್ಸಿಸ್ ಸಮೀಕ್ಷೆ
ಎಎಪಿ: 53
ಬಿಜೆಪಿ: 17
ಕಾಂಗ್ರೆಸ್: 2
ಟುಡೇಸ್ ಚಾಣಕ್ಯ
ಎಎಪಿ: 48
ಬಿಜೆಪಿ: 22
ಕಾಂಗ್ರೆಸ್: 00