ದೇಶ

ಅಂತೂ ಬಂತು ದೋಣಿಗಳಿಗೆ ಟ್ರ್ಯಾಕಿಂಗ್ ಸಾಧನ

ನವದೆಹಲಿ: ಮುಂಬೈ ಉಗ್ರ ದಾಳಿ ನಡೆದು 6 ವರ್ಷಗಳ ಬಳಿಕ ಕೊನೆಗೂ ಸಣ್ಣ ಮೀನುಗಾರಿಕಾ ದೋಣಿಗಳಿಗೆ ಜಾಡು ಪತ್ತೆ ಸಾಧನ (ಟ್ರ್ಯಾಕಿಂಗ್ ಡಿವೈಸ್) ಅಳವಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

ದೋಣಿಗಳ ಚಲನವಲನಗಳ ಮೇಲೆ ನಿಗಾ ಇಡಲು ಮತ್ತು ಕರಾವಳಿಯುದ್ದಕ್ಕೂ ಭದ್ರತಾ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ದೋಣಿಗಳಲ್ಲಿ ಉಚಿತವಾಗಿ ಟ್ರ್ಯಾಕಿಂಗ್ ಸಾಧನ ಅಳವಡಿಸಲಿದೆ. ಈ ಕುರಿತ ಸಂಪುಟ ಪ್ರಸ್ತಾಪವನ್ನು ಗೃಹ ಸಚಿವಾಲಯವು ಕಳುಹಿಸಿಕೊಟ್ಟಿದೆ. ಇದರಲ್ಲಿ 20 ಮೀ.ಗಿಂತ ಕಡಿಮೆ ಉದ್ದವಿರುವ ಮೀನುಗಾರಿಕಾ ದೋಣಿಗಳಲ್ಲಿ ಉಚಿತವಾಗಿ ಟ್ರಾನ್ಸ್‍ಪಾಂಡರ್‍ಗಳನ್ನು ಅಳವಡಿಸಲು ಅನುಮತಿ ಕೋರಲಾಗಿದೆ. ಅನುಮತಿ ದೊರೆತರೆ, ಕರಾವಳಿಯಿಂದ 50 ಕಿ.ಮೀ. ಅಂತರದವರೆಗೆದೋಣಿಗಳ ಟ್ರ್ಯಾಕಿಂಗ್ ಸಾಧ್ಯವಿದೆ.

SCROLL FOR NEXT